ನಟಿ ಅನಸೂಯಾ ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು.
ನಿರೂಪಕಿಯಾಗಿ ವೃತ್ತಿ ಪ್ರಾರಂಭಿಸಿದ ನಟಿ ಕಿರುತೆರೆ ಕೆರಿಯರ್‌ನಲ್ಲಿ ಸ್ಟಾರ್ ಆಂಕರ್ ಆಗಿದ್ದರು.
ಜಬರ್ದಸ್ತ್ ಸೇರಿದಂತೆ ಅನೇಕ ರಿಯಾಲಿಟಿ ಶೋನ ನಿರೂಪಕಿಯಾಗಿ ಅನಸೂಯಾ ಖ್ಯಾತಿ ಗಳಿಸಿದ್ದರು.
ರಂಗಸ್ಥಳ ಸಿನಿಮಾದಲ್ಲಿ ರಂಗಮ್ಮತ್ತೆ ಪಾತ್ರದಿಂದ ಅನಸೂಯಾಗೆ ಭಾರೀ ಕ್ರೇಜ್ ಸಿಕ್ಕಿತ್ತು. ಈ ಸಿನಿಮಾ ನಂತರ ಸಾಕಷ್ಟು ಆಫರ್‌ಗಳು ಬಂದವು.
ಪುಷ್ಪ ಚಿತ್ರ ಅನಸೂಯಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಭಾಗ-2ರಲ್ಲಿ ಅನಸೂಯಾ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇದೆಯಂತೆ.
ಇತ್ತೀಚೆಗೆ ಅನಸೂಯಾ ಪೆದ್ದಕಾಪು ಎಂಬ ಚಿತ್ರದಲ್ಲಿ ನಟಿಸಿದ್ದರು.
ಅನಸೂಯಾ ಇತ್ತೀಚೆಗೆ ಹಂಚಿಕೊಂಡ ಸೀರೆ ಚಿತ್ರಗಳು ವೈರಲ್ ಆಗುತ್ತಿವೆ.
ನಟಿಯ ಫೋಟೋಸ್‌ಗೆ ಅಭಿಮಾನಿಗಳು ʼಅನಸೂಯಾ ಸುಂದರಿʼ ಅಂತ ಕಾಮೆಂಟ್ ಮೂಲಕ ಹೊಗಳುತ್ತಿದ್ದಾರೆ.