ಕುಳ್ಳೂರು ಗದ್ದುಗೆ ಮಹಾಸಂಸ್ಥಾನದ ಮಠದಿಂದ ಪ್ರಶಸ್ತಿ ಪ್ರಧಾನ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಮಠ
ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅನುಶ್ರೀಗೆ ಒಲಿದ ಪ್ರಶಸ್ತಿ,
ಈ ಪ್ರಶಸ್ತಿ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ಅನುಶ್ರೀ
ಕಿರುತೆರೆಯ ನಟಿ ಹಾಗೂ ನಿರೂಪಕಿಯಾಗಿ ಅನುಶ್ರೀ ಜನಪ್ರಿಯತೆ ಪಡೆದಿದ್ದಾರೆ.
ಜೀ ಕನ್ನಡದ ರಿಯಾಲಿಟಿ ಶೋ ಸರಿಗಮಪ ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಇವರು ಜನಪ್ರಿಯರು.
ಬೆಂಕಿಪಟ್ನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ನೆಚ್ಚಿನ ನಿರೂಪಕಿಗೆ ಪ್ರಶಸ್ತಿ ಸಿಕ್ಕಿದಕ್ಕೆ ಅಭಿಮಾನಿಗಳು ಫುಲ್ ಖುಷ್.