ಆಲಿಯಾ ಸದಾ ತನ್ನ ಮಾತಿನ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಆಲಿಯಾ ಬಾಲ್ಯದಲ್ಲಿಯೂ ಬಹಳ ಮುದ್ದಾಗಿದ್ದರು.
30 ವರ್ಷದ ಆಲಿಯಾ, ೧೦ನೇ ತರಗತಿವರೆಗೆ ಮಾತ್ರ ಶಾಲೆಗೆ ಹೋಗಿದ್ದಾರೆ. ನಂತರ ಅವರು ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಂಡರು.
ಆಲಿಯಾ ಮುಂಬಯಿನ Jamnabai Narsee Schoolನಲ್ಲಿ ತಮ್ಮ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ.
1999ರಲ್ಲಿ ತೆರೆ ಕಂಡಿದ್ದ ಸಂಘರ್ಷ ಚಿತ್ರದಲ್ಲಿ ಆಲಿಯಾ ನಟಿಸಿದ್ದರು.
ತನ್ನ ತಂದೆ ತಾಯಿಯೊಂದಿಗೆ ಆಲಿಯಾ ಬಾಲ್ಯದಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಆಲಿಯಾ ತನ್ನ ಸಹೋದರಿ ಶಾಹಿನ್ ಭಟ್ ಅವರನ್ನು ಬಹಳ ಪ್ರೀತಿಸುತ್ತಾರೆ. ಕೆಲ ಸಮಯದ ಹಿಂದಷ್ಟೇ ಅವರು ತಮ್ಮ ಸಹೋದರಿಗಾಗಿ ಮನೆ ಖರೀದಿಸಿದ್ದರು.
ಸ್ಟೂಡೆಂಟ್ಸ್ ಆಫ್ ದಿ ಇಯರ್, ಡಾರ್ಲಿಂಗ್, 2 ಸ್ಟೇಟ್ಸ್, ಬದರಿ ಕಿ ದುಲ್ಹನಿಯಾ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಅಭಿನಯದ ರಾಕಿ ಔರ್ ರಾಣಿ ತೆರೆ ಕಾಣಲು ಸಿದ್ದವಾಗಿದೆ.
ಅಲಿಯಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
ಇವಿಷ್ಟು ಆಲಿಯಾ ಭಟ್ ಬಾಲ್ಯದ ಫೋಟೋಗಳು.