ತಮಿಳು ಚಿತ್ರರಂಗದ ಪ್ರಮುಖ ನಟ ವಿಕ್ರಮ್ ಅವರ ಆಸ್ತಿ ಮೌಲ್ಯದ ಮಾಹಿತಿ ಸದ್ಯ ಹೊರಬಿದ್ದಿದೆ.
ತಮಿಳು ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು. ಕಠಿಣ ಪರಿಶ್ರಮ, ನಟನೆಯಿಂದ ಮುನ್ನೆಲೆಗೆ ಬಂದಿದ್ದಾರೆ.
ನಟನಾಗಿ ಪಾದಾರ್ಪಣೆ ಮಾಡುವ ಮೊದಲು ಡಬ್ಬಿಂಗ್ ಆರ್ಟಿಸ್ಟ್ ಆಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
1990 ರಲ್ಲಿ 'ಎನ್ ಕಾದಲ್ ಕಣ್ಮಣಿ' ಚಿತ್ರದ ಮೂಲಕ ಅಭಿನಯ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ವಿಕ್ರಮ್ ಸದ್ಯ ಗೌತಮ್ ವಾಸುದೇವನ್ ನಿರ್ದೇಶನದ ಧ್ರುವ ನಕ್ಷತ್ರಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ವಿಕ್ರಮ ನಟನೆಯ ಬಹುನಿರೀಕ್ಷಿತ ಸಿನಿಮಾ ಚಿತ್ರ ತಂಗಲನ್ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.
ವಿಕ್ರಮ್ ಪ್ರಸ್ತುತ ಚಿತ್ರವೊಂದಕ್ಕೆ 25 ರಿಂದ 35 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಚೆನ್ನೈನಲ್ಲಿ ಕೆಲವು ಮನೆಗಳನ್ನು ಹೊಂದಿದ್ದಾರೆ. ಇದಲ್ಲದೆ, 5 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಸದ್ಯಕ್ಕೆ ವಿಕ್ರಮ್ ಸುಮಾರು 150 ಕೋಟಿ ಆಸ್ತಿಯ ಒಡೆಯ ಎಂದು ಹೇಳಲಾಗುತ್ತಿದೆ.