ತಮನ್ನಾ ತಮ್ಮ ನಟನಾ ಕೌಶಲ್ಯ ಮತ್ತು ಸೌಂದರ್ಯದಿಂದ ಪ್ರೇಕ್ಷಕರ ಮನ ಗೆದ್ದ ನಟಿ.
ತಮನ್ನಾ ತಮ್ಮ ವೃತ್ತಿಜೀವನವನ್ನು ಹಿಂದಿ ಚಿತ್ರರಂಗದಿಂದ ಪ್ರಾರಂಭಿಸಿದರು. ಆದರೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಮಿಂಚಿದ್ದಾರೆ.
ಹಿಂದಿ ಚಲನಚಿತ್ರ ಚಾಂದ್ ಸಾ ರೋಶಾ ಚೆಹ್ರಾ (2005) ಮೂಲಕ ತಮ್ಮ ತಮನ್ನಾ ನಟನಾ ವೃತ್ತಿ ಪ್ರಾರಂಭಿಸಿದರು.
2005 ರಲ್ಲಿ ಶ್ರೀ ಚಿತ್ರದ ಮೂಲಕ ತಮನ್ನಾ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ತಮನ್ನಾ 2006ರಲ್ಲಿ ಬಿಡುಗಡೆಯಾದ ಕೇಡಿ ಚಿತ್ರದ ಮೂಲಕ ತಮಿಳಿನಲ್ಲೂ ನಟಿಸಿದರು.
ಸಧ್ಯ ದಿಲೀಪ್ ಜೊತೆ ಬಾಂದ್ರಾ ಚಿತ್ರದ ಮೂಲಕ ಮಲಯಾಳಂನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.
ಬಾಹುಬಲಿ ಸಿನಿಮಾದಲ್ಲಿ ಅವಂತಿಕಾ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲ ಪ್ರೇಕ್ಷಕರ ಮನಗೆದ್ದರು.
ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಕನ್ನಡಿಗರಿಗೂ ಪರಿಚಯವಾದರು.