1. ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೊಲಗಿಸಲು ರಾಮಬಾಣ ಈ ನೀರು!
2. ನಾವು ನಮ್ಮ ದಿನದ ಆರಂಭವನ್ನು ಬಿದಿನೀರಿನಿಂದ ಪ್ರಾರಂಭಿಸಬೇಕು, ಅದು ನಮ್ಮ ದೇಹಕ್ಕೆ ತುಂಬಾ ಲಾಭದಾಯಕವಾಗಿದೆ.
3. ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರು ಸೇವಿಸಿದರೆ, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
4. ಬಿಸಿ ನೀರು ಸೇವನೆ ನಮ್ಮ ಪಚನ ಕ್ರಿಯೆಯನ್ನು ಉತ್ತಮವಾಗಿಡುತ್ತದೆ ಮತ್ತು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.
5. ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹೊರ ಹಾಕಲು ಬಿಸಿನೀರು ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು.
6. ದೇಹವನ್ನು ನಿರ್ವಿಷಗೊಳಿಸಲು ಬಿಸಿ ನೀರು ತುಂಬಾ ಲಾಭದಾಯಕ ಎನ್ನುತ್ತಾರೆ ತಜ್ಞರು, ಇದರಿಂದ ದೇಹದಲ್ಲಿ ಟಾಕ್ಸಿನ್ ಗಳು ಸಂಗ್ರಹವಾಗುವುದಿಲ್ಲ ಎನ್ನುತ್ತಾರೆ ತಜ್ಞರು.
7. ಅಷ್ಟೇ ಅಲ್ಲ ದೇಹವನ್ನು ಶುದ್ಧಗೊಳಿಸುವ ಒಂದು ಉತ್ತಮ ಸಾಧನ ಎಂದರೆ ಅದು ಬಿಸಿ ನೀರು ಎನ್ನುತ್ತದೆ ಆಯುರ್ವೇದ
8. ಆಯುರ್ವೇದದ ಪ್ರಕಾರ ಟಾಕ್ಸಿನ್ ಗಳು ನಮ್ಮ ದೇಹದಲ್ಲಿ ಕೊಳೆಯ ರೂಪದಲ್ಲಿ ಸಂಗ್ರಹವಾಗುತ್ತವೆ ಮತ್ತು ಇದು ತುಂಬಾ ಜಿಡ್ಡಾಗಿರುತ್ತದೆ.
9. ಈ ಕೊಳೆ ದೇಹದ ನೈಸರ್ಗಿಕ ಮೇಟಾಬಾಲಿಜಮ್, ಇಮ್ಯೂನಿಟಿ ಹಾಗೂ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
10. ಒಂದು ವೇಳೆ ನಿಮಗೆ ಕೇವಲ ಬಿಸಿನೀರು ಸೇವಿಸಲು ಆಗುವುದಿಲ್ಲ ಎಂದರೆ, ಬೇರೆ ಯಾವುದದ್ರೊಂದು ವಿಧಾನದ ಮೂಲಕ ನೀವು ಅದನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು.