ಜ್ವರ ಇದ್ದಾಗ ದೇಹದ ತಾಪಮಾನ ವಿಪರೀತ ಏರುತ್ತದೆ. ಇದು ಜ್ವರದ ಸಮಯದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ.
ಜ್ವರದ ವೇಳೆ ಕಡಿಮೆ ತಾಪಮಾನವಿದ್ದರೆ ಔಷಧಿಗಳಿಲ್ಲದಿದ್ದರೂ ಗುಣಮುಖರಾಗಬಹುದು. ಆದರೆ ಜ್ವರದೊಂದಿಗೆ ನಡುಕ, ಮೈ ಕೈ ನೋವು ಮತ್ತು ವಾಂತಿಯಂತಹ ಲಕ್ಷಣಗಳಿದ್ದರೆ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.
ಜ್ವರದ ಸಮಯದಲ್ಲಿ ಹೆಚ್ಚಿದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೆಚ್ಚು ನೀರು ಕುಡಿಯುವುದು ಅವಶ್ಯಕ. ನೀರನ್ನು ಕುಡಿಯದಿದ್ದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ದ ಸಮಸ್ಯೆಗೆ ಕಾರಣವಾಗಬಹುದು.
ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಜ್ವರದಿಂದ ಬಳಲುತ್ತಿರುವ ರೋಗಿಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು.
ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬಹುದು. ಸ್ನಾನ ಮಾಡುವುದರಿಂದ ದಣಿದ ಸ್ನಾಯುಗಳಿಗೆ ಪರಿಹಾರ ಸಿಗುತ್ತದೆ
ಜ್ವರ ಬಂದ ಕೂಡಲೇ ದಪ್ಪಗಿರುವ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಜ್ವರವು ಮತ್ತಷ್ಟು ಹೆಚ್ಚಾಗುತ್ತದೆ. ಜ್ವರದ ಸಂದರ್ಭದಲ್ಲಿ ಹಗುರವಾದ ಬಟ್ಟೆಗಳನ್ನು ಧರಿಸಿ.
ವಿಪರೀತ ಜ್ವರವಿದ್ದು, ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ತಾಪಮಾನವನ್ನು ತಗ್ಗಿಸಲು ನಿಮ್ಮ ದೇಹವನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ಪಾಂಜ್ ಮಾಡಿ.
ಕುಡಿಯುವ ನೀರು ಅಥವಾ ಇತರ ದ್ರವಗಳು ವಾಕರಿಕೆಗೆ ಕಾರಣವಾಗುತ್ತಿದ್ದರೆ, ಈ ಹೊತ್ತಿನಲ್ಲಿ ಐಸ್ ಅನ್ನು ಹೀರಬಹುದು. ಹಣ್ಣಿನ ರಸವನ್ನು ಐಸ್-ಕ್ಯೂಬ್ ಟ್ರೇನಲ್ಲಿ ಹಾಕಿ ಐಸ್ ಆದ ಬಳಿಕ ಅದನ್ನು ಹೀರುತ್ತಾ ಇರಬಹುದು.
ಗಂಟಲು ನೋವು ಮತ್ತು ಜ್ವರದಲ್ಲಿ ಗಾರ್ಗ್ಲಿಂಗ್ ಪರಿಹಾರವನ್ನು ನೀಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಬೆರೆಸಿ ಮತ್ತು ದಿನಕ್ಕೆ ನಾಲ್ಕು ಬಾರಿ ಗಾರ್ಗ್ಲಲ್ ಮಾಡಿ.