ಈ ಬೀಜ ನೆನೆಸಿದ ನೀರು ಕುಡಿದರೆ ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್ ಕರಗಿ ಹೋಗುವುದು!
ಅಜ್ವೈನ್ ಸೇವನೆಯಿಂದ ಯುರಿಕ್ ಆಸಿಡ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಈ ಮಸಾಲೆ ಔಷಧಿ ಇಲ್ಲದೆ ಯುರಿಕ್ ಆಸಿಡ್ ನಿಯಂತ್ರಿಸುತ್ತದೆ.
ದೇಹದಲ್ಲಿ ಯುರಿಕ್ ಆಸಿಡ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸಿದಾಗ ಅದರ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಮೊಣಕಾಲುಗಳಲ್ಲಿ ನೋವು ಮತ್ತು ಊತ, ಹೆಬ್ಬೆರಳು ನೋವು, ಕೈ ಗಂಟು ಗಳಲ್ಲಿನ ನೋವು ಯುರಿಕ್ ಆಸಿಡ್ ಹೆಚ್ಚಳದ ಲಕ್ಷಣಗಳಾಗಿವೆ.
ಅಜ್ವೈನ್ ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ಮಸಾಲೆಯಾಗಿದೆ. ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್, ಕಾರ್ಬೋಹೈಡ್ರೇಟ್‌ಗಳು ಹೊಂದಿದೆ.
ಅಜ್ವೈನ್ ಕ್ಯಾಲ್ಸಿಯಂ, ಥಯಾಮಿನ್, ರೈಬೋಫ್ಲಾವಿನ್, ರಂಜಕ, ಕಬ್ಬಿಣ ಮತ್ತು ನಿಯಾಸಿನ್‌ಗಳನ್ನು ಹೇರಳವಾಗಿ ಒಳಗೊಂಡಿದೆ.
ಅಧಿಕ ಯುರಿಕ್ ಆಸಿಡ್ ಸಮಸ್ಯೆ ಇರುವವರು ಅಜ್ವೈನ್ ನೀರನ್ನು ತಯಾರಿಸಿ ಸೇವಿಸಬಹುದು. ಇದರಿಂದ ಕೀಲು ನೋವು ಸಹ ಕಡಿಮೆ ಆಗುತ್ತದೆ.
ಒಂದು ಲೋಟ ನೀರಿಗೆ ಒಂದು ಚಮಚ ಅಜ್ವೈನ್ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ಉಗುರು ಬೆಚ್ಚಗಿನ ನೀರನ್ನು ಸೇವಿಸಿ.
ಅಜ್ವೈನ್ ಹುರಿದು ತಿನ್ನುವ ಮೂಲಕವೂ ಯುರಿಕ್ ಆಸಿಡ್ ಮಟ್ಟವನ್ನ ಕಡಿಮೆ ಮಾಡಬಹುದು. ಇದರಿಂದ ಮಂಡಿ ನೋವು ಸಹ ಗುಣವಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.