ಆಮ್ಲೀಯತೆ ಇರುವವರು ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಆಮ್ಲೀಹ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು
ಕರಿದ ಆಹಾರಗಳು, ಕೊಬ್ಬಿನ ಮತ್ತು ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಿ. ಬದಲಿಗೆ ನೀವು ಫೈಬರ್ ಭರಿತ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನಬಹುದು.
ಹಾಲು, ಚಹಾ ಮತ್ತು ಬೆಣ್ಣೆಯಂತಹ ಡೈರಿ ಉತ್ಪನ್ನಗಳು ಕೆಲವರಲ್ಲಿ ಆಮ್ಲೀಯತೆಯನ್ನು ಉಂಟುಮಾಡಬಹುದು. ಅಂತಹ ಜನರು ಸಾಧ್ಯವಾದಷ್ಟು ಇವುಗಳಿಂದ ದೂರವಿರಿ.
ಆಲೂಗಡ್ಡೆ, ಮತ್ತು ಬೀನ್ಸ್ ಕೆಲವು ಜನರಲ್ಲಿ ಆಮ್ಲೀಯತೆಯನ್ನು ಉಂಟುಮಾಡಬಹುದು.. ಆಮ್ಲೀಯತೆ ಹೆಚ್ಚಿಸುವ ಇಂತಹ ಆಹಾರ ತಪ್ಪಿಸುವುದು ಒಳ್ಳೆಯದು.
ಪಿಜಾ ಮತ್ತು ಪಾಸ್ತಾ ಕೆಲವರಲ್ಲಿ ಅಸಿಡಿಟಿಗೆ ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ತಿನ್ನುವುದನ್ನ ತಪ್ಪಿಸಿ
ಉಪ್ಪಿನಕಾಯಿಯನ್ನು ಸಾಧ್ಯವಾದಷ್ಟು ತಿನ್ನಬೇಡಿ.. ಇದು ಕೆಲವರಲ್ಲಿ ಅಸಿಡಿಟಿಗೆ ಕಾರಣವಾಗಬಹುದು.. ಎಚ್ಚರ..
ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಆರೋಗ್ಯ ವೃತ್ತಿಪರ ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ..