ಈ ಬದಲಾದ ಜೀವನಶೈಲಿಯಲ್ಲಿ ಪುಟ್ಟ ಪುಟ್ಟ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ.
ಈ ತಂತ್ರಜ್ಞಾನ ಯುಗದಲ್ಲಿ ಟಿವಿ, ಸ್ಮಾರ್ಟ್ಫೋನ್, ಕಂಪ್ಯೂಟರ್ ಹೀಗೆ ಗ್ಯಾಜೆಟ್ ಗಳ ಬಳಕೆ ಹೆಚ್ಚಾಗಿದ್ದು ಇದು ಕಣ್ಣಿನ ಸಮಸ್ಯೆಗಳಿಗೂ ಕಾರಣವಾಗಿದೆ.
ಕಣ್ಣಿನ ಸಮಸ್ಯೆಗೆ ವೈದ್ಯರು ಕನ್ನಡಕ ನೀಡುತ್ತಾರಾದರೂ ಕೆಲವರಲ್ಲಿ 'ಕನ್ನಡಕ ಧಾರಣೆ' ಆತ್ಮವಿಶ್ವಾಸವನ್ನೇ ಕುಂದಿಸುತ್ತದೆ.
ಕೆಲವು ಮಕ್ಕಳು ಕನ್ನಡ ಧಾರಣೆಯಿಂದ ತಾವು ಇತರರಿಗಿಂತ ಭಿನ್ನರು ಎಂಬ ಅಭಿಪ್ರಾಯ ಹೊಂದುತ್ತಾರೆ. ಇದರ ಪರಿಣಾಮ ಅವರ ಅಧ್ಯಯನದ ಮೇಲೂ ಕಂಡು ಬರುತ್ತದೆ.
ಕೆಲವು ಮನೆಮದ್ದುಗಳ ಸಹಾಯದಿಂದ ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ಪಡೆಯುವುದರ ಜೊತೆಗೆ ಕನ್ನಡಕಕ್ಕೂ ಸಹ ಗುಡ್ ಬೈ ಹೇಳಬಹುದು.
ಸೂಪರ್ ಫುಡ್ ಎಂತಲೇ ಪರಿಗಣಿಸಲಾಗಿರುವ ಹಾಲಿನಲ್ಲಿ ಒಂದು ವಿಶೇಷವಾದ ಪುಡಿ ಬೆರೆಸಿ ಕುಡಿಯುವುದು ಕಣ್ಣಿನ ಸರ್ವ ಸಮಸ್ಯೆಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ.
100 ಗ್ರಾಂ ಬಾದಾಮಿ, 100 ಗ್ರಾಂ ಕೆಂಪು ಕಲ್ಲು ಸಕ್ಕರೆ, 100 ಗ್ರಾಂ ಕಲ್ಲಂಗಡಿ ಬೀಜ, 100ಗ್ರಾಂ ದನಿಯ ಪುಡಿ, 6-8 ಕರಿ ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ದೃಷ್ಟಿದೋಷ ನಿವಾರಣೆ ಆಗುತ್ತದೆ.
ನಿತ್ಯ ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿನಲ್ಲಿ 1 ಸ್ಪೂನ್ ಮನೆಯಲ್ಲಿ ತಯಾರಿಸಿದ ಈ ಹಾಲಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಿಂಗಳಲ್ಲೇ ಇದರ ಪರಿಣಾಮ ಗೋಚರಿಸುತ್ತದೆ. ಕಣ್ಣಿನ ಸಮಸ್ಯೆಗಳಿಂದ ಪರಿಹಾರ ಕಾಣುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.