ಇವು ಬರೀ ಎಲೆಗಳಲ್ಲ ಪ್ರತಿರೋಗಕ್ಕೂ ದಿವೌಷಧ.. ಅರೆದು ರಸಮಾಡಿ ಕುಡಿದ್ರೆ ಯಾವ ಕಾಯಿಲೆನೂ ಹತ್ತಿರ ಸುಳಿಯಲ್ಲ!!
ಬಿಲ್ವಪತ್ರ ಎಲೆಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಅತ್ಯುತ್ತಮ ಪ್ರಯೋಜನಗಳನ್ನು ಹೊಂದಿವೆ.
ಬಿಲ್ವಪತ್ರೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ.
ಬಿಲ್ವಪತ್ರೆ ಸಂಧಿವಾತ ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ..
ದೇಹದ ವಾಸನೆ ಮತ್ತು ಮಧುಮೇಹವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಏಕೆ.. ಈ ಎಲೆಯನ್ನು ಹಲವು ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಪೂಜೆಯಲ್ಲಿ ಬಳಸುವ ಬಿಲ್ವಪತ್ರೆಯನ್ನು ಸೇವಿಸುವುದರಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬಿಲ್ವಪತ್ರೆ ಸೇವನೆ ತುಂಬಾ ಒಳ್ಳೆಯದು.
ಬಿಲ್ವಪತ್ರೆಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳಿವೆ.. ಇವುಗಳ ನಿಯಮಿತ ಸೇವನೆಯಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತವೆ..