ಹಾರ್ಟ್ ಬ್ಲಾಕೇಜ್ ತಡೆಯುವ ಪರಿಣಾಮಕಾರಿ ನೈಸರ್ಗಿಕ ವಿಧಾನಗಳು

Yashaswini V
Oct 23,2024

ಹಾರ್ಟ್ ಬ್ಲಾಕೇಜ್

ದೈನಂದಿನ ಜೀವನದಲ್ಲಿ ಕೆಲವು ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಹಾರ್ಟ್ ಬ್ಲಾಕೇಜ್ ಅಥವಾ ಹೃದಯಾಘಾತದ ಅಪಾಯವನ್ನು ತಡೆಗಟ್ಟಬಹುದು.

ಆಹಾರ ಪದ್ದತಿ

ದೈನಂದಿನ ಆಹಾರದಲ್ಲಿ ಹಣ್ಣು-ತರಕಾರಿಗಳು, ಆರೋಗ್ಯಕರ ಕೊಬ್ಬುಳ್ಳ ಆಹಾರಗಳನ್ನು ಸೇವಿಸಬೇಕು.

ವಾಕಿಂಗ್

ನಿತ್ಯ ತಪ್ಪದೇ ಕನಿಷ್ಠ 30-40 ನಿಮಿಷ ವಾಕಿಂಗ್ ಮಾಡುವುದರಿಂದ ಹೃದಯ ಬಲಗೊಳ್ಳುತ್ತದೆ.

ಒತ್ತಡ ನಿರ್ವಹಣೆ

ನಿತ್ಯ ಯೋಗ, ಧ್ಯಾನ, ಉಸಿರಾಟದ ವ್ಯಾಯಾಮಗಳಂತಹ ಒತ್ತಡ ನಿರ್ವಹಣೆಗೆ ಸಹಕಾರಿಯಾಗುವ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.

ರಕ್ತದೊತ್ತಡ

ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡಿ, ಇದಕ್ಕಾಗಿ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಆಹಾರಗಳನ್ನು ಸೇವಿಸಿ, ತಡರಾತ್ರಿವರೆಗೂ ಆಹಾರ ಸೇವಿಸುವುದನ್ನು ತಪ್ಪಿಸಿ.

ತೂಕ ಇಳಿಕೆ

ಅಧಿಕ ತೂಕ ಹೈ ಬಿಪಿ, ಹೃದ್ರೋಗದ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಇದನ್ನು ತಪ್ಪಿಸಲು ತೂಕ ನಿಯಂತ್ರಣಕ್ಕೆ ತೀವ್ರ ಗಮನಕೊಡಿ.

ನಿದ್ರೆ

ಪ್ರತಿದಿನ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಹೃದಯವನ್ನು ಆರೋಗ್ಯಕರವಾಗಿರಿಸಲು ಪ್ರಯೋಜನಕಾರಿ ಆಗಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story