ಮಜ್ಜಿಗೆಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ವಿಟಮಿನ್ ಬಿ ಸೇರಿದಂತೆ ಹಲವು ಪೋಷಕಾಂಶಗಳಿವೆ. ಹಾಗಾಗಿಯೇ ಇದನ್ನು ಆರೋಗ್ಯಕ್ಕೆ ದಿವ್ಯೌಷಧ ಎಂದು ಪರಿಗಣಿಯಲಾಗಿದೆ.
ಮಜ್ಜಿಗೆ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಮಜ್ಜಿಗೆ ಸೇವನೆಯಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಮಾತ್ರವಲ್ಲ, ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಆಹಾರ ತಜ್ಞರ ಪ್ರಕಾರ, ನಿಯಮಿತ ಮಜ್ಜಿಗೆ ಸೇವನೆಯು ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ.
ಮಜ್ಜಿಗೆಯು ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಿಸುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ.
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೆರಳವಾಗಿದ್ದು ಇದು ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ.
ಮಜ್ಜಿಗೆಯನ್ನು ಕಡಿದು ಸ್ವಲ್ಪ ಇಂದು ಬೆರೆಸಿ ಕುಡಿಯುವುದರಿಂದ ಇದು ಕೀಲು ನೋವನ್ನು ನಿವಾರಿಸುವಲ್ಲಿಯೂ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ಮಜ್ಜಿಗೆ ಕುಡಿಯುವುದರಿಂದ ಕೂದಲು ಆಕರ್ಷಕವಾಗುತ್ತದೆ. ತಲೆಗೆ ಸ್ನಾನ ಮಾಡುವಾಗ ಮೊದಲು ಮೊಸರನ್ನು ಕೂದಲಿಗೆ ಅನ್ವಯಿಸಿ ಸ್ನಾನ ಮಾಡುವುದರಿಂದ ತಲೆಹೊತ್ತು ನಿವಾರಣೆಯಾಗುತ್ತದೆ.
ಮೊಸರಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಮುಖಕ್ಕೆ ಲೇಪಿಸುವುದರಿಂದ ನಿಯಮಿತವಾಗಿ ಈ ಪ್ಯಾಕ್ ಬಳಸುವುದರಿಂದ ಸ್ವಚ್ಛ ತ್ವಚೆ ಪಡೆಯಬಹುದು. ಮಜ್ಜಿಗೆ ಕುಡಿಯುವುದರಿಂದ ಮೊಡವೆ ನಿವಾರಣೆಯಾಗುತ್ತದೆ.
ನಿತ್ಯ ಮಧ್ಯಾಹ್ನ ಒಂದು ಲೋಟ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ಈ ಅದ್ಭುತ ಲಾಭಗಳನ್ನು ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.