ಶುಗರ್ ಕಂಟ್ರೋಲ್ ಮಾಡುವುದರಿಂದ ಹಿಡಿದು ತೂಕ ಇಳಿಕೆವರೆಗೂ ತುಂಬಾ ಪ್ರಯೋಜನಕಾರಿ ಅಂಜೂರದ ನೀರು

Yashaswini V
Dec 24,2024

ಅಂಜೂರದ ನೀರು

ನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿನಲ್ಲಿ ಒಂದೆರಡು ಒಣಗಿದ ಅಂಜೂರ ನೆನೆಸಿಟ್ಟು ಬೆಳಗೆದ್ದು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

ಜೀರ್ಣಾಂಗ ವ್ಯವಸ್ಥೆ

ಅಂಜೂರದ ಹಣ್ಣು ಫೈಬರ್ನಲ್ಲಿ ಸಮೃದ್ಧವಾಗಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ.

ತೂಕ ಇಳಿಕೆ

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ನಿಂದ ಕೂಡಿರುವ ಅಂಜೂರದ ಹಣ್ಣಿನ ನೀರು ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಕೆ ಮಾಡಬಹುದು.

ಡಯಾಬಿಟಿಸ್

ನೀರಿನಲ್ಲಿ ಅಂಜೂರ ನೆನೆಸಿ ಕುಡಿಯುವುದರಿಂದ ಇದು ಗ್ಲೈಸೆಮಿಕ್ ಸೂಚಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಶುಗರ್ ಕಂಟ್ರೋಲ್ ಸುಲಭವಾಗುತ್ತದೆ.

ಹೃದಯದ ಆರೋಗ್ಯ

ಅಂಜೂರದಲ್ಲಿ ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳು ಕೂಡ ಹೆಚ್ಚಾಗಿದ್ದು ಇದು ಹೃದಯದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ.

ಬಲಿಷ್ಠ ಮೂಳೆಗಳು

ಅಂಜೂರದಲ್ಲಿ ಕ್ಯಾಲ್ಸಿಯಂ, ಮೇಗ್ನೀಸಿಯಂ ಸಮೃದ್ಧವಾಗಿದೆ. ನಿತ್ಯ ಖಾಲಿ ಹೊಟ್ಟೆಯಲ್ಲಿ ಇದರ ನೀರನ್ನು ಕುಡಿಯುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.

ಮಹಿಳೆಯರ ಆರೋಗ್ಯ

ಅಂಜೂರದ ನೀರು ಮಹಿಳೆಯರಲ್ಲಿ ಹಾರ್ಮೋನುಗಳನ್ನು ಸಮತೋಲನಗೊಳಿಸುವುದರ ಜೊತೆಗೆ ಗರ್ಭಕೋಶದ ಆರೋಗ್ಯಕ್ಕೂ ಲಾಭದಾಯಕವಾಗಿದೆ.

ಒತ್ತಡ ನಿವಾರಣೆ

ಅಂಜೂರವನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story