ನಿತ್ಯ ಸೂರ್ಯಕಾಂತಿ ಬೀಜಗಳನ್ನು ತಿಂದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ!

ಸೂರ್ಯಕಾಂತಿ ಬೀಜಗಳು

ಸೂರ್ಯಕಾಂತಿ ಬೀಜಗಳಲ್ಲಿ ಫೈಬರ್, ಒಲೀಕ್ ಆಸಿಡ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಇ, ಬಿ5, ನಿಯಾಸಿನ್, ಸತು, ಸೆಲೆನಿಯಮ್, ಸಮೃದ್ಧವಾಗಿರುವುದರಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಕೊಡುಗೆ ನೀಡುತ್ತದೆ.

ಪ್ರತಿರೋಧಕ ಶಕ್ತಿ

ಪ್ರತಿದಿನ ಎಂಟರಿಂದ ಹತ್ತು ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣ

ನಿತ್ಯ ಸೂರ್ಯಕಾಂತಿ ಬೀಜಗಳ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.

ಹೃದಯದ ಆರೋಗ್ಯ

ಸೂರ್ಯಕಾಂತಿ ಬೀಜದಲ್ಲಿರುವ ಪೋಷಕಾಂಶಗಳು ರಕ್ತದೊತ್ತಡ ಹೆಚ್ಚಾವುದನ್ನು ನಿಯಂತ್ರಿಸಿ ಹೃದ್ರೋಗದ ಅಪಾಯವನ್ನು ತಪ್ಪಿಸಲು ಸಹಾಯಕವಾಗಿದೆ.

ಕ್ಯಾನ್ಸರ್ ನಿಯಂತ್ರಣ

ಸೂರ್ಯಕಾಂತಿ ಬೀಜಗಳಲ್ಲಿರುವ ಆಂಟಿಆಕ್ಸಿಡೆಂಟ್ಗಳು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ.

ತೂಕ ನಷ್ಟ

ನಿತ್ಯ ಮುಂಜಾನೆ ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಿ ತೂಕ ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ.

ರಕ್ತಹೀನತೆ ಸಮಸ್ಯೆ

ಸೂರ್ಯಕಾಂತಿ ಬೀಜಗಳಲ್ಲಿ ಕಬ್ಬಿಣಾಂಶ ಹೆರಳವಾಗಿದ್ದು ಇದು ರಕ್ತಹೀನತೆ ಸಮಸ್ಯೆ ಇರುವವರಿಗೂ ಕೂಡ ಅತ್ಯುತ್ತಮ ಆಹಾರವಾಗಿದೆ.

ಚರ್ಮದ ಆರೋಗ್ಯ

ಸೂರ್ಯಕಾಂತಿ ಬೀಜಗಳಲ್ಲಿ ಆಂಟಿಫಂಗಲ್ ಗುಣಲಕ್ಷಣಗಳಿದ್ದು ಇದು ಚರ್ಮದ ಸೋಂಕುಗಳಿಂದ ನಮ್ಮನ್ನು ರಕ್ಷಿಸುವ ಶಕ್ತಿಯನ್ನು ಹೊಂದಿದೆ.

ಮಗುವಿನ ಬೆಳವಣಿಗೆ

ಗರ್ಭಿಣಿಯರು ನಿತ್ಯ ನಾಲ್ಕೈದು ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಇದು ಪ್ರಸವ ಪೂರ್ವ ಆರೋಗ್ಯ, ಮಗುವಿನ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story