ಡಬ್ಬದಲ್ಲಿ ಹಾಕಿಟ್ಟಿರುವ ಅಕ್ಕಿ,ಬೇಳೆಯಲ್ಲಿ ಕೆಲವೊಮ್ಮೆ ಹುಳ ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಅದನ್ನು ಮತ್ತೆ ಬಳಸುವುದು ಸಾಧ್ಯವಾಗುವುದಿಲ್ಲ.
ಅಕ್ಕಿಯ ಡಬ್ಬದಲ್ಲಿ ತೇವಾಂಶ ಹೆಚ್ಚಾದಾಗ ಡಬ್ಬಿಯಲ್ಲಿ ಕೀಟ ಮತ್ತು ಹುಳ ಕಾಣಿಸಿಕೊಳ್ಳುತ್ತವೆ.
ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಬೇಳೆ, ಹಿಟ್ಟು ಇದ್ದರೆ ಅದನ್ನು ಏರ್ ಟೈಟ್ ಕಂಟೈನರ್ ಒಳಗೆ ಹಾಕಿಡಬೇಕು.
ಬಿರಿಯಾನಿ ಎಲೆಯ ಘಾಟು ಕೀಟಗಳಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಅಕ್ಕಿ, ಬೇಳೆ ಕಾಳುಗಳ ಡಬ್ಬದಲ್ಲಿ ಈ ಎಲೆಯನ್ನು ಇಟ್ಟರೆ ಕೀಟಗಳು ಬರುವುದಿಲ್ಲ.
ಬಿರಿಯಾನಿ ಎಲೆಯನ್ನು ಒಂದು ಎಸಳು ಲವಂಗದ ಜೊತೆ ಕಟ್ಟಿ ಹಿಟ್ಟಿನ ಡಬ್ಬದಲ್ಲಿ ಹಾಕಿದರೆ ಎಷ್ಟೇ ಸಮಯ ಆದರೂ ಹಿಟ್ಟಿನಲ್ಲಿ ಹುಳ ಆಗುವುದಿಲ್ಲ.
ಹಿಟ್ಟು ಮಾತ್ರವಲ್ಲ ಅಕ್ಕಿ, ಬೇಳೆ ಕಾಳುಗಳ ಡಬ್ಬದಲ್ಲಿ ಈ ಎಲೆಯನ್ನು ಹಾಕಿಟ್ಟರೂ ಕಾಳುಗಳೆಲ್ಲಾ ಸೇಫ್.
ತಿಂಗಳ ರೇಶನ್ ತಂದು ಸೇಫ್ ಆಗಿ ಇಡುವುದು ಹೇಗೆ ಎನ್ನುವ ಯೋಚನೆ ಇದ್ದರೆ ಈ ವಿಧಾನವನ್ನು ಅನುಸರಿಸಿಕೊಳ್ಳಿ.
ಬಿರಿಯಾನಿ ಎಲೆಯನ್ನು ಮನೆಯಲ್ಲಿ ಕೀಟ, ಸೊಳ್ಳೆ, ನೊಣ ಬಾರದಂತೆ ತಡೆಯಲು ಕೂಡಾ ಬಳಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.