ಕೂದಲು ಉದುರುವುದಕ್ಕೆ ಬೆಳ್ಳುಳ್ಳಿ ನೈಸರ್ಗಿಕವಾಗಿ ಪರಿಹಾರ ನೀಡುತ್ತದೆ.
ಬೆಳ್ಳುಳ್ಳಿಯಲ್ಲಿ ಸಲ್ಫರ್ನ ಅಂಶವಿದ್ದು, ಇದು ಕೂದಲಿನ ಬೆಳವಣಿಗೆಗೆ ಅಗತ್ಯ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯು ಸತು ಮತ್ತು ಸೆಲೆನಿಯಂನಂತಹ ಖನಿಜಗಳನ್ನು ಹೊಂದಿದ್ದು, ಇದು ಸದೃಢ ಮತ್ತು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಈ ಖನಿಜಗಳು ಕೂದಲು ಒಡೆಯುವುದು ಅಥವಾ ಸೀಳಾಗುವುದನ್ನು ತಡೆಯಲು ಮತ್ತು ಕೂದಲು ಬುಡದಿಂದಲೇ ಬಲವಾಗಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಇದು ಕಾರಣವಾಗುತ್ತದೆ.
ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿನ ಬೆಳವಣಿಗೆಗೆ ನೆತ್ತಿಯ ಆರೋಗ್ಯವಾಗಿರುವುದು ಬಹಳ ಮುಖ್ಯ.
ಬೆಳ್ಳುಳ್ಳಿಯು ನೈಸರ್ಗಿಕ ಆಂಟಿಮೈಕ್ರೊಬಿಯಲ್ & ಆಂಟಿಫಂಗಲ್ ಗುಣಲಕ್ಷಣ ಹೊಂದಿದ್ದು, ಇದು ತಲೆಹೊಟ್ಟು & ತುರಿಕೆ ಮುಂತಾದ ನೆತ್ತಿಯ ಸೋಂಕನ್ನು ನಿರ್ಮೂಲನೆ ಮಾಡುತ್ತದೆ.
ಬೆಳ್ಳುಳ್ಳಿ ರಸ ಅಥವಾ ಎಣ್ಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಕೂದಲು ಹೊಳಪನ್ನು ಪಡೆದುಕೊಳ್ಳುವುದರ ಜೊತೆಗೆ ಕೂದಲು ಸೀಳುವುದು ಕಡಿಮೆಯಾಗುತ್ತದೆ.