ಪ್ರೋಟೀನ್ & ನಾರಿನಂಶ

ಬಾದಾಮಿಯು ವಿಟಮಿನ್ ‘E’, ಮ್ಯಾಂಗನೀಸ್, ಬಯೋಟಿನ್, ತಾಮ್ರ, ಮೆಗ್ನೀಷಿಯಂ, ಫಾಸ್ಪರಸ್, ಕಬ್ಬಿಣ, ಪ್ರೋಟೀನ್ & ನಾರಿನಂಶದಿಂದ ಸಮೃದ್ಧವಾಗಿದೆ.

ಮಲಬದ್ಧತೆ ನಿವಾರಣೆ

ನಿಯಮಿತವಾಗಿ ಬಾದಾಮಿ ಎಣ್ಣೆ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಕಿವಿನೋವು ನಿವಾರಣೆ

2-3 ಹನಿಯಷ್ಟು ಬಾದಾಮಿ ಎಣ್ಣೆಯನ್ನು ಎರಡೂ ಕಿವಿಗಳಿಗೆ ಹಾಕುವುದರಿಂದ ಕಿವಿನೋವು ನಿವಾರಣೆಯಾಗುತ್ತದೆ.

ಆರೋಗ್ಯಪೂರ್ಣ ತ್ವಚೆ

ಮಕ್ಕಳಿಗೆ ಅಭ್ಯಂಗ ಸ್ನಾನ ಮಾಡಿಸುವಾಗ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿದ್ರೆ ಚರ್ಮದ ಕಾಂತಿ ಜೊತೆಗೆ ಆರೋಗ್ಯಪೂರ್ಣ ತ್ವಚೆಯಾಗುತ್ತದೆ.

ಅಧಿಕ ಕ್ಯಾಲ್ಸಿಯಂ

ಬಾದಾಮಿಯಲ್ಲಿ ಹಸುವಿನ ಹಾಲಿಗಿಂತ ಅಧಿಕವಾದ ಕ್ಯಾಲ್ಸಿಯಂ ಇರುತ್ತದೆ. ಹಾಗಾಗಿ ಮಕ್ಕಳ ಬೆಳವಣಿಗೆಗೆ ಅತ್ಯಂತ ಸಹಕಾರಿ.

ನರಗಳಿಗೆ ಚೈತನ್ಯ

ನರಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಯಾವುದೇ ರೂಪದಲ್ಲಿ ಬಾದಾಮಿ ಸೇವಿಸಿದರೂ ನರಗಳಿಗೆ ಚೈತನ್ಯ ಬರುತ್ತದೆ.

ಮಲಬದ್ಧತೆ ನಿವಾರಣೆ

ಬಾದಾಮಿ ಜೊತೆಗೆ ಅಂಜೂರ ಅಥವಾ ಒಣದ್ರಾಕ್ಷಿ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಕಾಂತಿಯುತ ಕೂದಲು

ಬಾದಾಮಿ ಎಣ್ಣೆಯನ್ನು ತಲೆಯ ಬುಡದ ಭಾಗಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ ಕೂದಲು ಕಾಂತಿಯುತವಾಗಿ, ಚೆನ್ನಾಗಿ ಬೆಳೆಯಲು ಸಹಕಾರಿಯಾಗುತ್ತದೆ.

VIEW ALL

Read Next Story