ಭೋಜನದ ಬಳಿಕ ಮಜ್ಜಿಗೆ ಸೇವನೆಯಿಂದಾಗುವ ಪ್ರಯೋಜನಗಳು

ಮಜ್ಜಿಗೆ

ಮಜ್ಜಿಗೆ ಸೇವನೆಯು ಆರೋಗ್ಯಕ್ಕೆ ಅಮೃತಕ್ಕಿಂತ ಕಡಿಮೆಯಿಲ್ಲ. ಅದರಲ್ಲೂ ಭೋಜನದ ಬಳಿಕ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ...

ಪೋಷಕಾಂಶಗಳು

ಮಜ್ಜಿಗೆಯಲ್ಲಿ ವಿಟಮಿನ್ ಸಿ, ಎ, ಇ, ಕೆ ಮತ್ತು ಬಿಯಂತಹ ದೇಹಕ್ಕೆ ಅಗತ್ಯವಾದ ಸಾಕಷ್ಟು ಪೋಷಕಾಂಶಗಳು ಕಂಡು ಬರುತ್ತದೆ.

ಬೊಜ್ಜು ನಿವಾರಣೆ

ಮಜ್ಜಿಗೆ ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಪ್ರಮಾಣದ ಕೊಬ್ಬಿನಾಂಶವನ್ನು ಹೊಂದಿದ್ದು ಇದು ನಮ್ಮನ್ನು ಬೊಜ್ಜಿನ ಸಮಸ್ಯೆಯಿಂದ ದೂರವಿರಿಸುತ್ತದೆ.

ಮಲಬದ್ಧತೆ

ಊಟದ ನಂತರ ಜೀರಿಗೆ ಒಗ್ಗರಣೆಯುಕ್ತ ಮಜ್ಜಿಗೆ ಸೇವನೆಯಿಂದ ಮಲಬದ್ಧತೆ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ಸಿಗುತ್ತದೆ.

ಅಜೀರ್ಣ

ಹುರಿದ ಜೀರಿಗೆ, ಕರಿಮೆಣಸಿನ ಪುಡಿ ಮತ್ತು ಕಲ್ಲು ಉಪ್ಪನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಕೀಲು ನೋವು

ಆಹಾರ ಸೇವಿಸಿದ ನಂತರ ಮಜ್ಜಿಗೆ ಕುಡಿದರೆ ಕೀಲು ನೋವಿನಿಂದಲೂ ಪರಿಹಾರ ಸಿಗುತ್ತದೆ.

ಕೊಲೆಸ್ಟ್ರಾಲ್

ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story