ನಿಮ್ಮ ಪಾದಗಳನ್ನು ಉಪ್ಪು ನೀರಿನಲ್ಲಿ ಇಟ್ಟರೆ ಏನಾಗುತ್ತದೆ?
ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಬೇಕು. ಅದರಲ್ಲಿ ಪಾದಗಳನ್ನು ಇಡಬೇಕು. ಇದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ.
ಪ್ರತಿದಿನ ಸುಮಾರು 15 ನಿಮಿಷಗಳ ಕಾಲ ಈ ಉಪ್ಪು ನೀರಿನಲ್ಲಿ ಪಾದಗಳನ್ನು ಇಡಬೇಕು. ಉಪ್ಪಿನಲ್ಲಿ ಮೆಗ್ನೀಸಿಯಮ್ ಸಲ್ಫೇಟ್ ಗುಣಗಳಿವೆ.
ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಕಾಲಿಟ್ಟರೆ ದಿನವಿಡೀ ಮಾಡುವ ಕೆಲಸದ ಒತ್ತಡ ಕಡಿಮೆಯಾಗುತ್ತದೆ.
ಪಾದಗಳನ್ನು ಉಪ್ಪು ನೀರಿನಲ್ಲಿ ಇಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಒಳ್ಳೆಯ ನಿದ್ದೆ ಬರುತ್ತದೆ. ದೇಹಕ್ಕೆ ಉತ್ತಮ ವಿಶ್ರಾಂತಿ ಸಿಗುತ್ತದೆ.
ಈ ಉಪ್ಪು ನೀರು ಗರ್ಭಿಣಿಯರಿಗೂ ಅದ್ಭುತಗಳನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ, ಗರ್ಭಿಣಿಯರ ಕಾಲುಗಳು ಊದಿಕೊಳ್ಳುತ್ತದೆ. ಪಾದಗಳು ನೋವಿನಿಂದ ಕೂಡಿರುತ್ತವೆ.
ಆ ಸಮಯದಲ್ಲಿ ಉಪ್ಪು ನೀರಿನಲ್ಲಿ ಪಾದಗಳನ್ನು ಇಡಬೇಕು. ಬೆಚ್ಚಗಿನ ಉಪ್ಪು ನೀರಿನಲ್ಲಿ ಪಾದಗಳನ್ನು ಇರಿಸುವುದರಿಂದ, ರಕ್ತ ಪರಿಚಲನೆಯು ತುಂಬಾ ಉತ್ತಮವಾಗಿರುತ್ತದೆ. ನೋವು ಗುಣವಾಗುತ್ತದೆ.
ದಿನವಿಡಿ ಶೂ ಧರಿಸಿ ಓಡಾಡುವುದರಿಂದ ಬ್ಯಾಕ್ಟೀರಿಯಾ ಸೋಂಕು ಪಾದಗಳಲ್ಲಿ ಕಾಣಬಹುದು. ಇವು ಪಾದಗಳನ್ನು ಹಾಳುಮಾಡುತ್ತವೆ.
ಈ ಉಪ್ಪು ನೀರಿನಲ್ಲಿ ಪಾದಗಳನ್ನು ಇಡುವುದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದರಿಂದ ಪಾದಗಳಿಗೆ ಸೋಂಕು ತಗಲುವುದಿಲ್ಲ.
ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಯಿಡುವುದರಿಂದ ಒಡೆದ ಹಿಮ್ಮಡಿ ಯಿಂದ ಪರಿಹಾರ ಸಿಗುವುದು. ಹಿಮ್ಮಡಿ ನೋವು ಸಹ ಗುಣವಾಗುವುದು.