ವರ್ಷಗಳ ಕಾಲ ಜಿಡ್ಡುಗಟ್ಟಿದ ಹಲ್ಲುಗಳ ಮೇಲಿನ ಕಲೆಗಳನ್ನು ನಿಮಿಷಗಳಲ್ಲಿ ತೆಗೆದು ಹಾಕಲು ಹೀಗೆ ಮಾಡಿ..!

Zee Kannada News Desk
Oct 26,2024

ಲವಂಗ

ಬಿಸಿನೀರಿಗೆ ಲವಂಗವನ್ನು ಹಾಕಿ ಕುದಿಸಿ. ದಿನಕ್ಕೆ ಎರಡು ಬಾರಿ ಈ ನೀರಿನಿಂದ ಬಾಯಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತದೆ.

ಅಲೋವೆರಾ

ಅಲೋವೆರಾ ಜೆಲ್, ನಿಂಬೆ ರಸ, ಗ್ಲಿಸರಿನ್ ಮಿಶ್ರಣ ಮಾಡಿ. ಟೂತ್ ಬ್ರಶ್‌ ಅನ್ನು ಈ ಪೇಸ್ಟ್ನಲ್ಲಿ ಅದ್ದಿ ಬ್ರಷ್‌ ಮಾಡಿ ಇದರಿಂದ ಜಿಡ್ಡುಗಟ್ಟಿದ ಹಲ್ಲಿನ ಕಲೆ ಮಾಯವಾಗುತ್ತದೆ.

ಸಾಸಿವೆ ಎಣ್ಣೆ

ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸಿ. ಈ ನೀರಿನಿಂದ ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಹಲ್ಲಿನ ಮೇಲಿನ ಕಲೆ ನಿವಾರಣೆಯಾಗುತ್ತದೆ.

ಉಪ್ಪು

ನೀರಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ಬಾಯಿ ಮುಕ್ಕಳಿಸಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಹಲ್ಲುಗಳು ಆರೋಗ್ಯಕರವಾಗಿರುತ್ತವೆ.

ನಿಂಬೆ ರಸ

ಕಾಲು ಕಪ್ ಬಿಸಿ ನೀರಿಗೆ ಅರ್ಧ ಕಪ್ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಪ್ರತಿದಿನ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳು ಬಿಳಿಯಾಗಿ ಹೊಳೆಯುತ್ತವೆ.

ಹೈಡೋಜನ್ ಪೆರಾಕ್ಸ್‌ಡ್

ನೀರಿಗೆ ಸ್ವಲ್ಪ ಹೈಡೋಜನ್ ಪೆರಾಕ್ಸ್‌ಡ್ ಸೇರಿಸಿ ಮತ್ತು ಮಿಶ್ರಣ ಮಾಡಿ. ಈ ನೀರನ್ನು ಬಾಯಲ್ಲಿ ಸುರಿದು ಎರಡು ಅಥವಾ ಮೂರು ಬಾರಿ ಬಾಯಿ ಮುಕ್ಕಳಿಸಿ.

ಅಡಿಗೆ ಸೋಡಾ

ಅಡಿಗೆ ಸೋಡಾ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಡುಗೆ ಸೋಡಾವನ್ನು ಹಲ್ಲಿನ ಮೇಲೆ ಸ್ವಲ್ಪ ಹೊತ್ತು ಉಜ್ಜಿ. ಪ್ರತಿದಿನ ಹೀಗೆ ಮಾಡುವುದರಿಂದ ಹಲ್ಲುಗಳು ಬೆಳ್ಳಗಾಗುತ್ತವೆ.

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಹಲ್ಲಿನ ಮೇಲೆ ಸ್ವಲ್ಪ ಹೊತ್ತು ಉಜ್ಜಿ. ಹೀಗೆ ಮಾಡುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ.

VIEW ALL

Read Next Story