ಅನಿಯಂತ್ರಿತ ಮುಟ್ಟಿನ ಸಮಸ್ಯೆಗೆ ಬೆಸ್ಟ್ 5 ಮನೆಮದ್ದುಗಳು
ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಅಥವಾ ಹುಡುಗಿಯರಲ್ಲಿ ಸರಿಯಾದ ಸಮಯಕ್ಕೆ ಮುಟ್ಟು ಆಗದಿರುವುದು ಸಾಮಾನ್ಯ ಸಮಸ್ಯೆಯಾಗಿದೆ.
ಈ ವೈಜ್ಞಾನಿಕ ಯುಗದಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಹಲವು ಚಿಕಿತ್ಸೆ ಔಷಧಿಗಳು ಲಭ್ಯವಿವೆ. ಆದರೂ, ಕೆಲವು ಮನೆಮದ್ದುಗಳ ಸಹಾಯದಿಂದ ಮುಟ್ಟಿನ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ಅನಿಯಂತ್ರಿತ ಮುಟ್ಟಿನ ಸಮಸ್ಯೆಗೆ ಅರಿಶಿನ ರಾಮಬಾಣವಿದ್ದಂತೆ. ಪ್ರತಿದಿನ ಒಂದು ಲೋಟ ನೀರಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ನಿಯಮಿತವಾಗಿ ಶುಂಠಿ ಟೀ ಕುಡಿಯುವುದರಿಂದ ಪೀರಿಯಡ್ಸ್ ಸಂಬಂಧಿತ ಸಮಸ್ಯೆಗಳಿಂದ ಶೀಘ್ರವೇ ಪರಿಹಾರ ಪಡೆಯಬಹುದು.
ಆಗಾಗ್ಗೆ ಪರಂಗಿಕಾಯಿ ಸೇವಿಸುವುದರಿಂದ ಇಲ್ಲವೇ ಪರಂಗಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದಲೂ ಋತುಚಕ್ರದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ರಸವನ್ನು ಬಳಸುವುದರಿಂದ ಮುಟ್ಟಿನ ಸಮಸ್ಯೆಯಿಂದ ಸುಲಭ ಪರಿಹಾರ ದೊರೆಯುತ್ತದೆ.
ಎಳ್ಳು ಮತ್ತು ಬೆಲ್ಲವನ್ನು ಸೇವಿಸುವುದರಿಂದ ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಇದರಿಂದ ಸರಿಯಾದ ಸಮಯಕ್ಕೆ ಪೀರಿಯಡ್ಸ್ ಆಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.