ಆರೋಗ್ಯಕರ ಕೊಬ್ಬು, ಫೈಬರ್, ವಿಟಮಿನ್ ಗಳಲ್ಲಿ ಸಮೃದ್ಧವಾಗಿರುವ ಆವಕಾಡೊ ಮಧುಮೆಹಿಗಳಿಗೆ ವರದಾನವಿದ್ದಂತೆ.
ಕ್ರ್ಯಾನ್ ಬೆರಿ ಹಣ್ಣುಗಳಲ್ಲಿ ಕಂಡು ಬರುವ ಆಂಟಿಆಕ್ಸಿಡೆಂಟ್ ಗಳು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಪ್ರಯೋಜನಕಾರಿ ಆಗಿದೆ.
ರಸ್ಬೆರ್ರಿಸ್ ಹಣ್ಣುಗಳಲ್ಲಿ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಅಷ್ಟೇ ಅಲ್ಲ ಇದು ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿ ಆಗಿದೆ.
ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಗಳಲ್ಲಿ ಸಮೃದ್ದವಾಗಿರುವ ಸ್ಟ್ರಾಬೆರಿ ಹಣ್ಣುಗಳಲ್ಲಿಯೂ ಸಿಹಿ ಕಡಿಮೆ ಇರುತ್ತದೆ. ಇದು ಕೂಡ ಮಧುಮೆಹಿಗಳಿಗೆ ಲಾಭದಾಯಕ.
ಕಿವಿ ಹಣ್ಣು ಟಾರ್ಟ್, ವಿಟಮಿನ್ಗಳು ಮತ್ತು ಆಂಟಿಆಕ್ಸಿಡೆಂಟ್ ಗಳಿಂದ ತುಂಬಿದ್ದು ಇದು ಮಧುಮೇಹ ನಿಯಂತ್ರಣಕ್ಕೆ ರಾಮಬಾಣ.
ಪರಂಗಿಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಜೀರ್ಣಕಾರಿ ಕಿಣ್ವಗಳು ಸಮೃದ್ಧವಾಗಿದ್ದು ಇದು ಕೂಡ ಮಧುಮೆಹಿಗಳು ತಿನ್ನಬಹುದಾದ ಹಣ್ಣಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.