ಶ್ರೀಗಂಧದ ಪುಡಿಯೊಂದಿಗೆ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಅಂಡರ್ ಆರ್ಮ್ಸ್ ಗೆ ಲೇಪಿಸಿ ಐದು ನಿಮಿಷಗಳ ಬಳಿಕ ವಾಶ್ ಮಾಡಿ.
ಜೇನುತುಪ್ಪದಲ್ಲಿ, ನಿಂಬೆ ರಸ ಬೆರೆಸಿ ಅಂಡರ್ ಆರ್ಮ್ಸ್ ಗೆ ಹಚ್ಚಿ 10 ನಿಮಿಷಗಳ ಬಳಿಕ ಮಸಾಜ್ ಮಾಡಿ ತೊಳೆಯಿರಿ.
ಒಣಗಿಸಿದ ಕಿತ್ತಳೆ ಸಿಪ್ಪೆಯನ್ನು ಪುಡಿ ಮಾಡಿ ಇದರಲ್ಲಿ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಕಂಕುಳಿಗೆ ಹಚ್ಚಿ 10 ನಿಮಿಷಗಳ ಬಳಿಕ ಅಂಡರ್ ಆರ್ಮ್ಸ್ ವಾಶ್ ಮಾಡಿ.
ನೈಸರ್ಗಿಕ ಬ್ಲೀಚ್ ಆಗಿರುವ ಆಲೂಗಡ್ಡೆಯನ್ನು ಎರಡು ಭಾಗ ಮಾಡಿ ಅಂಡರ್ ಆರ್ಮ್ಸ್ ಗೆ ಹಚ್ಚಿ ಐದು ನಿಮಿಷ ಮಸಾಜ್ ಮಾಡಿ. ವಾರದಲ್ಲಿ ಎರಡು-ಮೂರು ಬಾರಿ ಹೀಗೆ ಮಾಡಿದರೆ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶ ನೋಡಬಹುದು.
ಅಂಡರ್ ಆರ್ಮ್ಸ್ ಗಳಿಗೆ ಸಕ್ಕರೆಯನ್ನು ಸ್ಕ್ರಬ್ ಆಗಿ ಬಳಸುವುದರಿಂದ ಕಪ್ಪು ಕಲೆ ನಿವಾರಿಸಬಹುದು.
ಆಗಾಗ್ಗೆ ನೀವು ರೋಸ್ ವಾಟರ್ ನಿಂದ ಅಂಡರ್ ಆರ್ಮ್ಸ್ ಕ್ಲೀನ್ ಮಾಡುವುದರಿಂದ ಕಂಕುಳು ಕಪ್ಪಾಗುವುದನ್ನು ತಪ್ಪಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.