ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತವು ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹರಿಯುತ್ತಿದ್ದರೆ ಅದನ್ನು ರಕ್ತದೊತ್ತಡ (BP)ವೆಂದು ಕರೆಯಲಾಗುತ್ತದೆ.
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಅಧಿಕ ರಕ್ತದೊತ್ತಡ ಸಮಸ್ಯೆಯು ಹೃದ್ರೋಗ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.
ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡರೆ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು.
ಮೊದಲಿಗೆ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕು, ಅಂದರೆ ಉಪ್ಪು ಹೆಚ್ಚು ತಿನ್ನಬೇಬಾರದು.
ಸಾಫ್ಟ್ ಡ್ರಿಂಕ್, ಚಿಪ್ಸ್, ಪ್ಯಾಕೆಟ್ ಅಥವಾ ಕ್ಯಾನ್ಡ್ ಆಹಾರಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತದೆ, ಹೀಗಾಗಿ ಸಂಸ್ಕರಿತ ಆಹಾರ ಸೇವಿಸಬೇಡಿ.
ಪ್ರಿಸರ್ವೇಟಿವ್ ಬಳಸಿದ ಬಹುತೇಕ ಆಹಾರಗಳಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗಿರುತ್ತದೆ.
ತಾಜಾ ಆಹಾರಗಳು ಮತ್ತು ಸತ್ವಭರಿತ ಆಹಾರಗಳ ಸೇವನೆಯತ್ತ ಗಮನ ನೀಡುವುದರಿಂದ ಬಿಪಿ ನಿಯಂತ್ರಣಕ್ಕೆ ತರಬಹದು.