ಮಹಿಳೆಯರ ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ ಗೋಡಂಬಿ!

ಹಾರ್ಮೋನ್ ಬ್ಯಾಲೆನ್ಸ್

ಗೋಡಂಬಿಯಲ್ಲಿ ಸತು, ಮೇಗ್ನಿಸಿಯಮ್ ಇದ್ದು ಇದು ಮಹಿಳೆಯರಲ್ಲಿ ಹಾರ್ಮೋನ್ ಸಮತೋಲನಕ್ಕೆ ಪ್ರಯೋಜನಕಾರಿ ಆಗಿದೆ.

ಆರೋಗ್ಯಕರ ಸಂತಾನೋತ್ಪತ್ತಿ

ಗೋಡಂಬಿಯಲ್ಲಿ ಕಂಡು ಬರುವ ಕಬ್ಬಿಣಾಂಶ, ಫೋಲೇಟ್ ಅಂಶಗಳು ಮಹಿಳೆಯರಲ್ಲಿ ಆರೋಗ್ಯಕರ ಸಂತಾನೋತ್ಪತ್ತಿಗೆ ಲಾಭದಾಯಕವಾಗಿದೆ.

ಕೊಲೆಸ್ಟ್ರಾಲ್ ನಿಯಂತ್ರಣ

ಗೋಡಂಬಿಯಲ್ಲಿ ಮೊನೊಸ್ಯಾಚುರೇಟೆಡ್ ಕೊಬ್ಬುಗಳು ಹೇರಳವಾಗಿದ್ದು ಇದು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ.

ಮೂಳೆಯ ಆರೋಗ್ಯ

ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳ ಗಣಿಯಾಗಿರುವ ಗೋಡಂಬಿ ಸೇವನೆಯಿಂದ ಮಹಿಳೆಯರಲ್ಲಿ ಮೂಳೆಗಳು ಬಲಗೊಳ್ಳುತ್ತವೆ.

ರೋಗನಿರೋಧಕ ಶಕ್ತಿ

ಸೀಮಿತ ಪ್ರಮಾಣದ ಗೋಡಂಬಿ ಸೇವನೆಯಿಂದ ಮಹಿಳೆಯರಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ.

ತೂಕ ಇಳಿಕೆ

ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಗೋಡಂಬಿ ಬಳಕೆಯಿಂದ ಆರೋಗ್ಯಕರವಾಗಿ ತೂಕ ನಿಯಂತ್ರಿಸಬಹುದು.

ರಕ್ತಹೀನತೆ

ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಆಹಾರದಲ್ಲಿ ಗೋಡಂಬಿ ಬಳಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಸೆಳೆತ

ಗೋಡಂಬಿಯಲ್ಲಿ ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ಕೂಡ ಸಮೃದ್ಧವಾಗಿದೆ. ಹಾಗಾಗಿ, ಇದರ ಬಳಕೆಯಿಂದ ಮಹಿಳೆಯರು ಕೈ-ಕಾಲಿನ ಸೆಳೆತದಿಂದ ಪರಿಹಾರ ಪಡೆಯಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story