ಮನೆಯಂಗಳದಲ್ಲಿ ಇದೊಂದು ಗಿಡ ನೆಟ್ಟರೆ ಒಂದೇ ಒಂದು ಹಾವು ಕೂಡ ಆ ಕಡೆ ಬರಲ್ಲ!

ಹಾವುಗಳೆಂದರೆ ಅನೇಕರಿಗೆ ಭಯ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಹೆಚ್ಚಾಗಿ ಹಾವುಗಳು ಮನೆಯೊಳಗೆ ಬರುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ಓಡಿಸಲು ಪಡುವ ಪಾಡು ಅಂತಿಂಥದಲ್ಲ.

ಪರಿಹಾರ

ಹೀಗಿರುವಾಗ ಮನೆಯೊಳಗೆ ಹಾವುಗಳು ಬಾರದಂತೆ ತಡೆಯುವ ಕೆಲ ಸಸ್ಯಗಳಿವೆ. ಅವುಗಳನ್ನು ಮನೆ ಮುಂದೆ ನೆಟ್ಟರೆ ಸಮಸ್ಯೆಗೆ ಖಚಿತ ಪರಿಹಾರ ಸಿಗುತ್ತದೆ.

ಸರ್ಪಗಂಧ

ಸರ್ಪಗಂಧವು ಅನೇಕ ನೈಸರ್ಗಿಕ ಗುಣಗಳನ್ನು ಅಡಗಿಸಿಕೊಂಡಿರುವ ಸಸ್ಯ. ಇದರ ಬೇರುಗಳು ಹಳದಿ ಅಥವಾ ಕಂದು ಬಣ್ಣದಲ್ಲಿರುತ್ತವೆ. ಅದರ ಎಲೆಗಳ ಬಣ್ಣವು ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ. ಇದರ ವೈಜ್ಞಾನಿಕ ಹೆಸರು Savulfia serpentina. ಈ ಸಸ್ಯದ ವಾಸನೆ ತುಂಬಾ ವಿಚಿತ್ರ. ಇದೇ ಕಾರಣದಿಂದ ಮನೆಯ ಬಳಿಕ ಈ ಗಿಡ ನೆಟ್ಟರೆ, ಅದರ ವಾಸನೆಗೆ ಯಾವ ಹಾವು ಕೂಡ ಬರಲ್ಲ.

ಮುಗ್ವರ್ಟ್

ಈ ಸಸ್ಯ ಕೂಡ ವಿಶೇಷ ರೀತಿಯ ಪರಿಮಳವನ್ನು ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಕಳೆ ಗಿಡ ಎಂದು ಕಿತ್ತೆಸೆಯುವುದು ಕೂಡ ಉಂಟು. ಆದರೆ ಇದು ಹಾವುಗಳನ್ನು ಓಡಿಸಲು ಬೆಸ್ಟ್‌ ಪರಿಹಾರ.

ಬೆಳ್ಳುಳ್ಳಿ ಗಿಡ

ಬೆಳ್ಳುಳ್ಳಿ: ಬೆಳ್ಳುಳ್ಳಿ ಗಿಡ ನೆಟ್ಟರೆ ಸಹ ಹಾವುಗಳನ್ನು ಓಡಿಸಬಹುದು. ಇದರ ವಿಶೇಷತೆ ಎಂದರೆ ಈ ಸಸ್ಯವು ಶೀತ ಮತ್ತು ಶಾಖ ಎರಡನ್ನೂ ಚೆನ್ನಾಗಿ ಸಹಿಸಿಕೊಳ್ಳುತ್ತದೆ. ಈ ಸಸ್ಯದ ಮೂಲ ದಕ್ಷಿಣ ಆಫ್ರಿಕಾ. ಹಾವುಗಳಿಂದ ರಕ್ಷಿಸುವ ಗುಣಲಕ್ಷಣಗಳ ಹೊರತಾಗಿ, ಈ ಸಸ್ಯವು ಅನೇಕ ಇತರ ವಿಷಯಗಳಿಗೆ ಸಹ ಉಪಯುಕ್ತ.

ಲೆಮನ್ ಗ್ರಾಸ್

ಹೆಸರೇ ಸೂಚಿಸುವಂತೆ ಈ ಗಿಡದ ವಾಸನೆ ನಿಂಬೆಯಂತಿರುತ್ತದೆ. ಅಂದಹಾಗೆ ಇದೊಂದು ಔಷಧೀಯ ಸಸ್ಯ. ಇದು ಹೆಚ್ಚಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಈ ಗಿಡವನ್ನು ಮನೆಯ ಸುತ್ತಮುತ್ತ ಬೆಳೆಸಿದರೆ ಹಾವು ಮಾತ್ರವಲ್ಲ, ಸೊಳ್ಳೆಗಳ ಕಾಟದಿಂದಲೂ ಪರಿಹಾರ ಪಡೆಯಬಹುದು.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಗಳನ್ನು ಪಡೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story