ಲವಂಗವನ್ನು ಹೆಚ್ಚಾಗಿ ವಿಧ ವಿಧವಾದ ಅಡುಗೆಗಳಲ್ಲಿ ಬಳಸುವುದರಿಂದ ರುಚಿಕರ ಹಾಗೂ ಸುವಾಸನೆ ಭರಿತವಾಗಿರುತ್ತದೆ.ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು

Zee Kannada News Desk
Feb 10,2024

ಉತ್ಕರ್ಷಣ ನಿರೋಧಕ

ಲವಂಗದಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶಗಳು ಇರುವುದರಿಂದ ದೇಹವನ್ನು ರಕ್ಷಣೆ ಮಾಡುವುದಲ್ಲದೇ ವಯಸ್ಸಾದ ಲಕ್ಷಣಗಳನ್ನು ತಡೆಯುತ್ತದೆ.

ಜೀರ್ಣಕ್ರಿಯೆ

ಹೊಟ್ಟೆಯಲ್ಲಿನ ಕಲ್ಮಶಗಳನ್ನು ತೆಗೆದು ಹಾಕಿ,ಜೀರ್ಣಕ್ರಿಯೆಯನ್ನು ಸಡಿಲಗೊಳಿಸುತ್ತದೆ.

ಹಲ್ಲು ನೋವು

ಹಲ್ಲುಗಳಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶ ಪಡಿಸಲು ಲವಂಗವು ಉಪಯುಕ್ತವಾಗಿದ್ದೂ,ವಸಡುಗಳನ್ನು ಆರೋಗ್ಯವಾಗಿಡುತ್ತದೆ.

ಮಧುಮೇಹ

ಆಹಾರದಲ್ಲಿ ಒಂದೆರಡು ಲವಂಗವನ್ನು ಸೇವಿಸಿದ್ದಲ್ಲಿ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಕೆಮ್ಮು

ಕೆಮ್ಮು ಅಥವಾ ಗಂಟಲಿನಲ್ಲಿ ಕಿರಿ ಕಿರಿ ಉಂಟಾಗುತ್ತಿದ್ದಲ್ಲಿ ಮಲಗುವ ಮುನ್ನ ಲವಂಗವನ್ನು ಜಗಿಯಿರಿ.ರೋಗ ಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಉರಿಯೂತ

ದೇಹದಲ್ಲಿ ಉರಿಯೂತ ಸಮಸ್ಯೆ ಹೆಚ್ಚಾಗಿದ್ದೂ ಚಹಾದೊಂದಿಗೆ ಲವಂಗ ಪುಡಿಯನ್ನು ಬಳಸಿ ಸೇವಿಸುವುದರಿಂದ ಉರಿಯೂತವನ್ನು ಸುಧಾರಿಸಿಕೊಳ್ಳಬಹುದು.

ಯಕೃತ್ತು

ಮಧ್ಯಪಾನ ಅಥವಾ ಧೂಮಪಾನದ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಲು ಲವಂಗ ಸಹಕಾರಿಯಾಗಿದ್ದೂ, ಯಕೃತ್ತಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ.

ಸಿಹಿತಿಂಡಿ

ಲವಂಗವನ್ನು ಕೇವಲ ಮಸಾಲೆ ಪದಾರ್ಥಗಳಲ್ಲಿ ಬಳಸುವುದಲ್ಲದೇ ಸಿಹಿತಿನಿಸುಗಳಲ್ಲಿಯೂ ಬಳಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

VIEW ALL

Read Next Story