ಏಲಕ್ಕಿ ಅಡುಗೆಯ ರುಚಿ ಮತ್ತು ಘಮವನ್ನುಹೆಚ್ಚಿಸುತ್ತದೆ. ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಕೂಡಾ ಒಳಗೊಂಡಿದೆ. ಬಾಯಿ ಹುಣ್ಣಿಗೆ ಏಲಕ್ಕಿ ರಾಮಬಾಣ ಪರಿಹಾರವಾಗಿ ಕೆಲಸ ಮಾಡುತ್ತದೆ.
ಏಲಕ್ಕಿಯನ್ನು ಜಗಿದು ತಿನ್ನುವ ಮೂಲಕ ಬಾಯಿ ಹುಣ್ಣಿನಿಂದ ಪರಿಹಾರ ಪಡೆಯಬಹುದು.
ಇದಕ್ಕಾಗಿ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಏಲಕ್ಕಿಯನ್ನು ಜಗಿದು ತಿನ್ನಬೇಕು. ಹೀಗೆ ಮಾಡುವುದರಿಂದ ಗಂಟಲಿನ ಕಿರಿ ಕಿರಿ ಕೂಡಾ ಕಡಿಮೆಯಾಗುತ್ತದೆ.
ಏಲಕ್ಕಿ ನೀರನ್ನು ಕುಡಿಯುವುದರಿಂದಲೂ ಬಾಯಿ ಹುಣ್ಣಿನಿಂದ ಮುಕ್ತಿ ಸಿಗುತ್ತದೆ.
ಇದಕ್ಕಾಗಿ 2-3 ಏಲಕ್ಕಿಯನ್ನು ಜಜ್ಜಿ ನೀರಿನೊಳಗೆ ಹಾಕಿಡಿ.ಬೆಳಿಗ್ಗೆ ಮತ್ತು ಸಂಜೆ ಈ ನೀರನ್ನು ಸೇವಿಸಿ.
ಏಲಕ್ಕಿಯನ್ನು ಸಿಪ್ಪೆ ಸಮೇತ ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಬಾಯಿ ಹುಣ್ಣಿನ ಮೇಲೆ ಹಚ್ಚಿ. ಇದರಿಂದ ನೋವು ಕಡಿಮೆಯಾಗುತ್ತದೆ.
ಏಲಕ್ಕಿ ಪುಡಿಯನ್ನು ಕೂಡಾ ಬಾಯಿ ಹುಣ್ಣಿಗೆ ಹಚ್ಚಿದರೆ ಹುಣ್ಣು ಮತ್ತು ನೋವು ಬೇಗನೆ ನಿವಾರಣೆಯಾಗುತ್ತದೆ.
ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.