ನಿತ್ಯವೂ 10 ರಿಂದ 12 ಕಾಳು ಮೆಂತ್ಯೆ ಜೀಜ ತಿಂದರೆ ಸಿಗುವುದು ಅದ್ಭುತ ಪ್ರಯೋಜನ

Ranjitha R K
Sep 25,2023

ಪೋಷಕಾಂಶಗಳ ಆಗರ

ಮೆಂತ್ಯೆ ಪೋಷಕಾಂಶಗಳ ಆಗರ. ಇದು ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕಬ್ಬಿಣದಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಮಧುಮೇಹ ನಿರ್ವಹಣೆ

ಮೆಂತ್ಯೆ ಬೀಜಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮೊಮೊರ್ಡಿಸಿನ್ ಎಂಬ ವಿಶಿಷ್ಟ ಸಕ್ರಿಯ ಸಂಯುಕ್ತವನ್ನು ಹೊಂದಿದ್ದು, ಇನ್ಸುಲಿನ್ ಸ್ರವಿಸುವಿಕೆಗೆ ಸಹಾಯ ಮಾಡುತ್ತದೆ.

ತೂಕ ಕಡಿಮೆಯಾಗುತ್ತದೆ

ಮೆಂತ್ಯೆ ಬೀಜಗಳು ಕೊಬ್ಬಿನಾಮ್ಲಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಸಹಕಾರಿ.

ಹೃದಯದ ಆರೋಗ್ಯ ಸುಧಾರಿಸುತ್ತದೆ

ಮೆಂತ್ಯೆ ಬೀಜಗಳು ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಅನ್ನು ಹೊಂದಿರುತ್ತವೆ.ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಮೆಂತ್ಯೆ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆ ಮೂಲಕ ಮಲಬದ್ಧತೆ, ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ರಕ್ತದೊತ್ತಡ ನಿಯಂತ್ರಣ:

ಮೆಂತ್ಯೆ ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೂದಲಿಗೆ ಬಲ:

ಮೆಂತ್ಯೆ ಬೀಜದ ಪೇಸ್ಟ್ ಕೂದಲಿಗೆ ಹಚ್ಚುವುದರಿಂದ ಕೂದಲು ಬಲಗೊಳ್ಳುತ್ತದೆ. ಮಾತ್ರವಲ್ಲ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.

ಸ್ತನ ಕ್ಯಾನ್ಸರ್ ತಡೆಗಟ್ಟಲು

ಮಹಿಳೆಯರು ಮೆಂತ್ಯ ಬೀಜಗಳನ್ನು ತಿನ್ನಬೇಕು , ಏಕೆಂದರೆ ಅವುಗಳು ಫೈಟೊಸ್ಟ್ರೊಜೆನ್ ಗಳನ್ನು ಹೊಂದಿರುತ್ತವೆ. ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ

ಮೆಂತ್ಯೆ ಬೀಜಗಳ ಪೇಸ್ಟ್ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ಸೂಚನೆ

ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story