ಮಧುಮೇಹ ರೋಗಿಗಳು ಈ ಹಸಿರು ಎಲೆಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
ದಿನಕ್ಕೆ 10 ಕರಿಬೇವು ಎಲೆಗಳನ್ನು ಅಗಿದು ಅಥವಾ ಅದರ ರಸವನ್ನು ತೆಗೆದು ಸೇವಿಸಿದರೆ ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ.
ಒಂದು ತಿಂಗಳ ಕಾಲ ನಿತ್ಯ ಇನ್ಸುಲಿನ್ ಸಸ್ಯದ ಎಲೆಯನ್ನು ಅಗಿಯುತ್ತಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು.
ನಿಯಮಿತವಾಗಿ ಸಬ್ಬಸಿಗೆ ಸೊಪ್ಪು ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸುವುದು ಸಾಧ್ಯವಾಗುತ್ತದೆ.
ಅಲೋವೆರಾ ಎಲೆಗಳಿಂದ ತೆಗೆದ ಜೆಲ್ ಅನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
ತುಳಸಿ ಎಲೆಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯಬಹುದು .
10 ರಿಂದ 15 ಮಾವಿನ ಎಲೆಗಳನ್ನು ಕುದಿಸಿ ರಾತ್ರಿಯಿಡೀ ನೀರಿನಲ್ಲಿ ಹಾಗೆಯೇ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಈ ಸುದ್ದಿ ಬರೆಯುವಲ್ಲಿ ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.