ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದು ಇತರ ಹಣ್ಣುಗಳಿಗಿಂತ ಭಿನ್ನವಾಗಿರುತ್ತದೆ.
ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ. ಹಾಗಾಗಿ ದಿನಕ್ಕೆ ಒಂದು ಹಣ್ಣು ತಿಂದರೆ ಸಾಕು ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.
ಮಾವಿನಲ್ಲಿ ಪೊಟ್ಯಾಷಿಯಂ ಕೂಡಾ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಹಾಗಾಗಿ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ವಿಟಮಿನ್ ಸಿಯಿಂದ ಸಮೃದ್ದವಾಗಿರುವ ಮಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಒಂದು ವೇಳೆ ಬ್ಲಡ್ ಶುಗರ್ ಜಾಸ್ತಿಯಾಗಿದ್ದಲ್ಲಿ ಮಾವು ತಿನ್ನಬಾರದು, ಇದರಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.
ಮಾವಿನ ಹಣ್ಣನ್ನು ದಿನಕ್ಕೆ ಒಂದೇ ಸೇವಿಸಬೇಕು, ಇಲ್ಲವಾದರೆ ಅತಿಸಾರದ ತೊಂದರೆ ಕಾಡಬಹುದು.
ನಿತ್ಯ ಮಾವು ತಿನ್ನುವುದರಿಂದ ತೂಕ ಹೆಚ್ಚಾಗುವ ಅಪಾಯವೂ ಇರುತ್ತದೆ. ಹಾಗಾಗಿ ತೂಕ ಇಳಿಸಬೇಕು ಎಂದಿದ್ದರೆ ಮಾವು ತಿನ್ನದಿರುವುದು ಒಳ್ಳೆಯದು.
ಒಂದು ವೇಳೆ ಮೂಗಿನಿಂದ ರಕ್ತಸ್ತ್ರಾವವಾಗುವುದು ಅಥವಾ ತ್ವಚೆಗೆ ಸಂಬಂಧಪಟ್ಟ ಅಲರ್ಜಿ ಇದ್ದರೆ ಮಾವಿನ ಹಣ್ಣು ಸೇವಿಸದೆ ಇರುವುದೇ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.