ಕೂದಲು ಉದುರುವುದಕ್ಕೆ ನಾನಾ ಕಾರಣಗಳಿರುತ್ತವೆ. ಕೆಲವು ಆಹಾರಗಳನ್ನು ಸೇವಿಸುವ ಮೂಲಕವೇ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬಹುದು.
ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಅನೇಕರಲ್ಲಿ ಮಾನಸಿಕ ಸಮಸ್ಯೆ ಉಂಟು ಮಾಡುತ್ತದೆ.
ಕೂದಲನ್ನು ಸದೃಢವಾಗಿಸಲು ಕೆಲವೊಂದು ಆಹಾರ ಸೇವಿಸಬೇಕು. ಸರಿಯಾದ ಪೋಷಕ ತತ್ವಗಳನ್ನು ಒಳಗೊಂಡಿರುವ ಆಹಾರ ಸೇವನೆಯಿಂದ ಕೂದಲಿನ ಆರೋಗ್ಯವನ್ನು ಕೂಡಾ ಕಾಪಾಡಬಹುದು.
ನೆಲ್ಲಿಕಾಯಿ ಒಂದು ಸೂಪರ್ ಫುಡ್. ಇದರಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಶಿಯಂ, ವಿಟಮಿನ್ ಸಿ, ಫೈಬರ್, ಮುಂತಾದ ಪೋಷಕ ತತ್ವಗಳು ಅಡಗಿವೆ.
ನೆಲ್ಲಿಕಾಯಿಯನ್ನು ಕೂದಲಿಗೆ ಹಚ್ಚುವುದು ಮಾತ್ರವಲ್ಲ ತಿನ್ನುವುದರಿಂದಲೂ ಕೂದಲು ಉದುರುವುದನ್ನು ತಡೆಯಬಹುದು.
ಮೆಂತ್ಯೆ ಕಾಳು ಕೂದಲಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲು ಗಟ್ಟಿಯಾಗುತ್ತದೆ.
ಮೆಂತ್ಯೆ ಕಾಳನ್ನು ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆ ತಡೆಯುತ್ತದೆ.
ನೆಲ್ಲಿಕಾಯಿಯನ್ನು ಕೂದಲಿಗೆ ಹಚ್ಚುವ ಬದಲು ನೆಲ್ಲಿಕಾಯಿ ಮತ್ತು ತೆಂಗಿನೆಣ್ಣೆ ಸೇವನೆ ಮೂಲಕವೂ ಕೂದಲು ಉದುರುವುದನ್ನು ತಡೆಯಬಹುದು.
ಸೂಚನೆ:ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.