ಮಧುಮೇಹ

ಮಧುಮೇಹಿಗಳು ಈ ವಿಷಯಗಳಿಂದ ದೂರವಿರಬೇಕು, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ.

ಗಂಭೀರ ಕಾಯಿಲೆ

ಮಧುಮೇಹವು ಗಂಭೀರವಾದ ಕಾಯಿಲೆಯಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಆಹಾರ ಪದ್ಧತಿಯ ಬಗ್ಗೆ ವಿಶೇಷ ಗಮನಹರಿಸುವುದರಿಂದ ಇದನ್ನು ಖಂಡಿತವಾಗಿಯೂ ನಿಯಂತ್ರಿಸಬಹುದು.

ಜಾಗೃತೆ ವಹಿಸಬೇಕು

ಒಂದು ವೇಳೆ ನೀವೂ ಮಧುಮೇಹಿಗಳಾಗಿದ್ದರೆ ಯಾವ ವಿಷಯಗಳ ಬಗ್ಗೆ ಜಾಗೃತೆ ವಹಿಸಬೇಕು ಅನ್ನೋದರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಎಣ್ಣೆಯುಕ್ತ ಆಹಾರ

ಮಧುಮೇಹ ಇರುವವರು ಎಣ್ಣೆಯುಕ್ತ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.

ಪ್ಯಾಕ್‌ ಮಾಡಿದ ಆಹಾರಗಳು

ಮಧುಮೇಹಿಗಳು ಪ್ಯಾಕ್‌ ಮಾಡಿದ ಆಹಾರಗಳನ್ನು ಸಹ ತ್ಯಜಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಪಾನೀಯಗಳು

ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯು ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಈ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ.

ಅನ್ನ

ಮಧುಮೇಹದಿಂದ ಬಳಲುತ್ತಿರುವವರು ಬಿಳಿ ಅನ್ನವನ್ನು ತಿನ್ನುವುದನ್ನು ಆದಷ್ಟು ತಪ್ಪಿಸಬೇಕು. ಏಕೆಂದರೆ ಅಕ್ಕಿಯಲ್ಲಿ ಹೆಚ್ಚಿನ ಗ್ಲೈಸೆಮಿಕ್‌ ಇಂಡೆಕ್ಸ್‌ ಇರುತ್ತದೆ.

ಜಂಕ್‌ಫುಡ್‌ಗಳು

ಮಧುಮೇಹಿಗಳು ಜಂಕ್‌ಫುಡ್‌ಗಳಿಂದ ಸಂಪೂರ್ಣವಾಗಿ ದೂರವಿರಬೇಕು.

VIEW ALL

Read Next Story