ಮಧುಮೇಹ

ಮಧುಮೇಹವನ್ನು ನಿಯಂತ್ರಿಸಲು ಕೆಲವು ತರಕಾರಿಗಳು ಸೇವಿಸಬೇಕು. ಪ್ರತಿನಿತ್ಯದ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಬಹುದು.

ಆಹಾರ ಪದ್ಧತಿ

ಮಧುಮೇಹದಿಂದ ಸಂಪೂರ್ಣವಾಗಿ ಮುಕ್ತಿ ಹೊಂದಲು ಸಾಧ್ಯವಿಲ್ಲವೆಂದು ನಂಬಲಾಗಿದೆ. ಆದರೆ ತಜ್ಞರ ಪ್ರಕಾರ, ವ್ಯಾಯಾಮ ಮತ್ತು ಆಹಾರ ಪದ್ಧತಿಯಿಂದ ಮಧುಮೇಹವನ್ನು ನಿಯಂತ್ರಿಸಬಹುದು.

ತರಕಾರಿಗಳು

ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ರಮುಖ ತರಕಾರಿಗಳ ಬಗ್ಗೆ ನಾವಿಂದು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಪಾಲಕ್‌ ಸೊಪ್ಪು

ಮಧುಮೇಹ ರೋಗಿಗಳಿಗೆ ಪಾಲಕ್‌ ಒಂದು ವರದಾನವೆಂದೇ ಹೇಳಬಹುದು. ಪಾಲಕ್‌ ಕಡಿಮೆ ಗ್ಲೈಸೆಮಿಕ್‌ ಸೂಚಿಯನ್ನು ಹೊಂದಿದೆ. ಇದರೊಂದಿಗೆ ಪಾಲಕ್‌ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಬೆಂಡೆಕಾಯಿ

ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿ ಇನ್ಸುಲಿನ್‌ ಉತ್ಪಾದಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ

ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯು ಅದನ್ನು ತನ್ನ ಆಹಾರದಲ್ಲಿ ಸೇರಿಕೊಳ್ಳಬೇಕು.

ಬ್ರೊಕೊಲಿ

ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸಲು ಬ್ರೊಕೊಲಿ ಉಪಯುಕ್ತವಾಗಿದೆ.

VIEW ALL

Read Next Story