ಈ ಬದಲಾದ ಜೀವನಶೈಲಿಯಲ್ಲಿ ಬಹಳಷ್ಟು ಮಂದಿ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಈ 10 ಆಹಾರಗಳಿಂದ ಸಾಧ್ಯವಾದಷ್ಟೂ ದೂರವಿರಿ. ಆ ಆಹಾರಗಳೆಂದರೆ...

Yashaswini V
Jul 27,2023

ಮಾಂಸಾಹಾರ

ಮಾಂಸಾಹಾರಿ ಆಹಾರವು ಸಾಕಷ್ಟು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಅತಿಯಾದ ಮಾಂಸಾಹಾರ ಸೇವನೆಯು ಗ್ಯಾಸ್ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಉಪ್ಪಿನಕಾಯಿಯ

ಊಟಕ್ಕೆ ಉಪ್ಪಿನಕಾಯಿ ತುಂಬಾ ರುಚಿ. ಆದರೆ, ಇದು ಆಮ್ಲೀಯತೆಯನ್ನು ಉಂಟುಮಾಡುತ್ತದೆ.

ಸಿಹಿ

ಸಕ್ಕರೆ/ ಸಿಹಿ ಸ್ವಭಾವವು ಆಮ್ಲೀಯವಾಗಿರುತ್ತದೆ. ಹೆಚ್ಚು ಸಕ್ಕರೆ ಸೇವನೆಯು ಅಸಿಡಿಟಿಗೆ ಕಾರಣವಾಗುತ್ತದೆ.

ಮೊಸರು

ರಾತ್ರಿ ವೇಳೆ ಮೊಸರು ಸೇವನೆಯಿಂದಲೂ ಅಸಿಡಿಟಿ ಹೆಚ್ಚಾಗಬಹುದು.

ಮಸಾಲೆಯುಕ್ತ ಆಹಾರ

ರಾತ್ರಿ ವೇಳೆ ಮಸಾಲೆಯುಕ್ತ ಆಹಾರ ಸೇವನೆಯಿಂದಲೂ ಅಸಿಡಿಸಿ ಹೆಚ್ಚಾಗುತ್ತದೆ.

ಕೂಲ್ ಡ್ರಿಂಕ್ಸ್

ಕೆಲವರಿಗೆ ಎಲ್ಲಾ ಋತುವಿನಲ್ಲೂ ಕೂಲ್ ಡ್ರಿಂಕ್ಸ್ ಸೇವನೆ ತುಂಬಾ ಇಷ್ಟಾ. ಆದರೆ ಎಚ್ಚರ, ಇವು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಸಿಡಿಟಿಯಂತಹ ಸಮಸ್ಯೆಯನ್ನೂ ಹೆಚ್ಚಿಸುತ್ತದೆ.

ಕಿತ್ತಳೆ ಹಣ್ಣು

ನಿಮಗೆ ಮೊದಲೇ ಅಸಿಡಿಟಿ ಸಮಸ್ಯೆ ಇದ್ದರೆ ಕಿತ್ತಳೆ ಹಣ್ಣನ್ನು ಮಿತವಾಗಿ ಸೇವಿಸಿ.

ನಿಂಬೆಹಣ್ಣು

ನಿಂಬೆ ಕೂಡ ಸಿಟ್ರಸ್ ಹಣ್ಣು. ಅಸಿಡಿಟಿ ಸಮಸ್ಯೆ ಇರುವವರು ನಿಂಬೆ ಹಣ್ಣಿನ ಸೇವನೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು.

ಕಚ್ಚಾ ತರಕಾರಿ ಸಲಾಡ್

ರಾತ್ರಿ ವೇಳೆ ಕಚ್ಚಾ ತರಕಾರಿ ಸಲಾಡ್ ತಿನ್ನುವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ, ರಾತ್ರಿ ವೇಳೆ ಕ್ಯಾರೆಟ್, ಸೌತೆಕಾಯಿ ಅಥವಾ ಎಲೆಕೋಸುಗಳಂತಹ ತರಕಾರಿ ಸೇವನೆಯಿಂದ ಅಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ.

ಚಾಕೊಲೇಟ್

ಚಾಕೊಲೇಟ್ ಎಂದರೆ ಹೆಣ್ಣು ಮಕ್ಕಳಿ ತುಂಬಾ ಪ್ರೀತಿ. ಆದರೆ, ನೆನಪಿಡಿ ಅಸಿಡಿಟಿ ಸಮಸ್ಯೆ ಇರುವವರಿಗೆ ಚಾಕೊಲೇಟ್ ಸೇವನೆ ಒಳ್ಳೆಯದಲ್ಲ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story