ಕರ್ಪೂರದ ದೀಪವನ್ನು ಬೆಳಗುವುದರಿಂದ ದೇವರ ಅನುಗ್ರಹದ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ.
ಕರ್ಪೂರವು ಅಪಾರ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಗುಣಲಕ್ಷಣಗಳನ್ನು ಹೊಂದಿದೆ.
ಮನೆಯಲ್ಲಿ ಕರ್ಪೂರ ಬೆಳಗುವುದರಿಂದ ಗಾಳಿಯಲ್ಲಿರುವ ರೋಗಾಣುಗಳು ನಾಶವಾಗುತ್ತವೆ & ಶುದ್ಧ ಗಾಳಿ ಉಸಿರಾಡಲು ಸಹಾಯವಾಗುತ್ತದೆ.
ಕರ್ಪೂರ ಹಚ್ಚುವುದರಿಂದ ಬರುವ ಸಣ್ಣ ಪ್ರಮಾಣದ ಹೊಗೆ ಅಸ್ತಮಾ ಅಥವಾ ಉಸಿರಾಟ ತೊಂದರೆ ಉಳ್ಳವರಿಗೆ ಸಕಾರಾತ್ಮಕ ಪ್ರಭಾವ ಉಂಟುಮಾಡುತ್ತದೆ.
ಕರ್ಪೂರದ ಸುವಾಸನೆ ತೆಗೆದುಕೊಂಡರೆ ಮಾನಸಿಕ ಒತ್ತಡ ಮತ್ತು ಆತಂಕ ದೂರವಾಗುತ್ತದೆ.
ಕರ್ಪೂರವು ನೈಸರ್ಗಿಕ ಕೀಟ ವಿರೋಧಿಯಾಗಿದ್ದು, ನಿಮ್ಮ ಮನೆಗೆ ಸೊಳ್ಳೆಗಳು ಮತ್ತು ಇರುವೆಗಳು ಬರುವುದಿಲ್ಲ.
ಕರ್ಪೂರದಲ್ಲಿ ನಿಮ್ಮನ್ನು ದೈವತ್ವದ ಕಡೆಗೆ ಸೆಳೆಯುವ ಶಕ್ತಿ ಇದೆ ಎಂದು ಹೇಳಲಾಗಿದೆ.
ಕರ್ಪೂರವನ್ನು ಹಚ್ಚುವುದರಿಂದ ಮನೆಯ ಎಲ್ಲಾ ಸದಸ್ಯರ ಮನಸ್ಸುಗಳಲ್ಲಿ ಪ್ರಶಾಂತವಾಗಿರುತ್ತದೆ & ಮನೆ ತುಂಬಾ ಸಕಾರಾತ್ಮಕತೆ ಇರುತ್ತದೆ.