ಯೂರಿಕ್ ಆಸಿಡ್ ಸಮಸ್ಯೆ ಇದ್ದವರಿಗೆ ವಿಷವಿದ್ದಂತೆ ಈ ತರಕಾರಿಗಳು

Yashaswini V
Nov 13,2024

ಯೂರಿಕ್ ಆಸಿಡ್

ಯೂರಿಕ್ ಆಸಿಡ್ ಸಮಸ್ಯೆ ಇದ್ದವರು ತಾವು ತಿನ್ನುವ ಆಹಾರಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಕೆಲವು ತರಕಾರಿಗಳ ಸೇವನೆಯಿಂದ ಯೂರಿಕ್ ಆಸಿಡ್ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ಪ್ಯೂರಿನ್ ಅಧಿಕವಾಗಿದ್ದು ಇದು ರಕ್ಗದಲ್ಲಿ ಯೂರಿಕ್ ಆಸಿಡ್ ಅನ್ನು ಹೆಚ್ಚಿಸುತ್ತದೆ.

ಹೂಕೋಸು

ಕೆಲವರಿಗೆ ತುಂಬಾ ಪ್ರಿಯ ತರಕಾರಿಗಳಲ್ಲಿ ಒಂದಾದ ಹೂಕೋಸಿನಲ್ಲಿ ಪ್ಯೂರಿನ್ ಅಂಶ ಮಧ್ಯಮ ಪ್ರಮಾಣದಲ್ಲಿದ್ದು ಇದರಿಂದಲೂ ಯೂರಿಕ್ ಆಸಿಡ್ ಹೆಚ್ಚಾಗುವ ಸಾಧ್ಯತೆ ಇದೆ.

ಮಶ್ರೂಮ್

ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುವ ಮಶ್ರೂಮ್ ಸಹ ಯೂರಿಕ್ ಆಸಿಡ್ ರೋಗಿಗಳಿಗೆ ವಿಷವಿದ್ದಂತೆ.

ಹಸಿ ಬಟಾಣಿ

ಯೂರಿಕ್ ಆಸಿಡ್ ಸಮಸ್ಯೆ ಇರುವವರು ಹಸಿ ಬಟಾಣಿ ಸೇವಿಸುವುದರಿಂದ ಕೂಡಲೇ ಈ ಸಮಸ್ಯೆ ಉಲ್ಬಣಗೊಳ್ಳಬಹುದು.

ಕುಂಬಳಕಾಯಿ

ಕುಂಬಳಕಾಯಿ ಕೂಡ ವ್ಯಕ್ತಿಯ ದೇಹದಲ್ಲಿ ಸೌಮ್ಯವಾಗಿ ಯೂರಿಕ್ ಆಸಿಡ್ ಹೆಚ್ಚಿಸುತ್ತದೆ. ಹಾಗಾಗಿ, ಯೂರಿಕ್ ಆಸಿಡ್ ಸಮಸ್ಯೆ ಇದ್ದವರು ಈ ತರಕಾರಿಗಳನ್ನು ಸೇವಿಸುವಾಗ ತುಂಬಾ ಎಚ್ಚರಿಕೆಯಿಂದ ಇರಿ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story