ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ಏನು ಮಾಡಬೇಕು? ಯಾವುದನ್ನೂ ಮಾಡಬಾರದು?

ಕಾಂಟ್ಯಾಕ್ಟ್ ಲೆನ್ಸ್‌ ಟಿಪ್ಸ್

ಕಣ್ಣುಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಕಾಂಟ್ಯಾಕ್ಟ್ ಲೆನ್ಸ್‌ ಧರಿಸುವಾಗ ಏನು ಮಾಡಬೇಕು? ಏನು ಮಾಡಬಾರದು ಎಂಬ ಬಗ್ಗೆ ಅರಿವಿರಬೇಕು. ಅಂತಹ ಕೆಲವು ಟಿಪ್ಸ್ ಇಲ್ಲಿದೆ.

ಮಲಗುವಾಗ ಕಾಂಟ್ಯಾಕ್ಟ್ ಲೆನ್ಸ್‌

ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿ ಮಲಗುವುದು ಗಂಭೀರ ಕಣ್ಣಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ, ಮಲಗುವಾಗ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕಬಾರದು.

ಲೆನ್ಸ್ ಸ್ವಚ್ಛತೆ

ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವ ಮೊದಲು ಅದನ್ನು ಸರಿಯಾದ ರೀತಿಯಲ್ಲಿ ಕಣ್ಣಿನ ಆರೈಕೆ ತಜ್ಞರ ಸಲಹೆಯಂತೆ ಅವುಗಳನ್ನು ಸ್ವಚ್ಛಗೊಳಿಸಿ. ಇದರಿಂದ ಕಣ್ಣಿನ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ನೈರ್ಮಲ್ಯ

ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯುವುದಷ್ಟೇ ಅಲ್ಲ, ನಿಯಮಿತವಾಗಿ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಕೊಳಕಾದ ಕೈಯಲ್ಲಿ ಲೆನ್ಸ್/ಕಣ್ಣುಗಳನ್ನು ಮುಟ್ಟಬೇಡಿ.

ಅವಧಿ ಮೀರಿದ ಲೆನ್ಸ್ ಬಳಕೆ

ಯಾವುದೇ ಕಾರಣಕ್ಕೂ ಅವಧಿ ಮೀರಿದ, ಇಲ್ಲವೇ ಹಾನಿಗೊಳಗಾದ ಲೆನ್ಸ್‌ಗಳನ್ನು ಬಳಸಬೇಡಿ.

ಸ್ವಿಮ್ಮಿಂಗ್

ಸ್ವಿಮ್ಮಿಂಗ್ ಮಾಡುವಾಗ, ಇಲ್ಲವೇ ಸ್ನಾನ ಮಾಡುವಾಗ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಬಾರದು. ಇದು ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಶೇರಿಂಗ್

ಕೆಲವೊಮ್ಮೆ ಒಬ್ಬರ ಕನ್ನಡಕ ಮತ್ತೊಬ್ಬರು ಧರಿಸುವಂತೆ ನೀವು ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story