ತ್ವಚೆಯ ಕಾಂತಿ ಹೆಚ್ಚಿಸಲು ಸೇಬಿನ ಸಿಪ್ಪೆಯನ್ನು ಹೀಗೆ ಬಳಸಿ

ಸೇಬಿನ ಸಿಪ್ಪೆ

ಸೇಬು ಆರೋಗ್ಯಕ್ಕೆ ಭಾರೀ ಪ್ರಯೋಅನ ನೀಡುತ್ತದೆ. ಆದರೆ ಕೆಲವೊಮ್ಮೆ ಅದರ ಸಿಪ್ಪೆ ತೆಗೆದು ಎಸೆದು ಬಿಡುತ್ತೇವೆ. ಆದರೆ ನಾವು ಎಸೆಯುವ ಈ ಸಿಪ್ಪೆ ಅನೇಕ ರೀತಿಯಲ್ಲಿ ನಮಗೆ ಸಹಕಾರಿಯಾಗಬಲ್ಲದು.

ಫೇಸ್ ಪ್ಯಾಕ್

ಮನೆಯಲ್ಲಿ ಸೇಬಿನ ಸಿಪ್ಪೆಯ ಫೇಸ್ ಪ್ಯಾಕ್ ಮಾಡುವ ಮೂಲಕ ಮುಖದ ಕಾಂತಿ ಹೆಚ್ಚಿಸಬಹುದು.

ಸೇಬಿನ ಸಿಪ್ಪೆಯ ಪೇಸ್ಟ್

ಇದಕ್ಕಾಗಿ ಮೊದಲು ಸೇಬಿನ ಸಿಪ್ಪೆಯನ್ನು ಒಣಗಿಸಿ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಇದಲ್ಲದೆ ಸೇಬಿನ ಸಿಪ್ಪೆಯ ಪೇಸ್ಟ್ ಅನ್ನು ಕೂಡಾ ಬಳಸಬಹುದು.

ಸೇಬಿನ ಸಿಪ್ಪೆಯ ಪೌಡರ್

ಒಂದು ಬೌಲ್ನಲ್ಲಿ ಸೇಬಿನ ಸಿಪ್ಪೆಯ ಪೌಡರ್ ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಒಟ್ಸ್, ಒಂದು ಚಮಚ ಜೇನುತುಪ್ಪ ಸ್ವಲ್ಪ ರೋಜ್ ವಾಟರ್ ಹಾಕಿ.

ಮಸಾಜ್

ಈಗ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ. 20 ನಿಮಿಷಗಳವರೆಗೆ ಬಿಡಿ.

ವೃತ್ತಾಕಾರದಲ್ಲಿ ಮಸಾಜ್

ನಂತರ ವೃತ್ತಾಕಾರದಲ್ಲಿ ಮುಖದ ಮಸಾಜ್ ಮಾಡಿಕೊಳ್ಳಿ. ಈಗ ಸಾಧಾರಣ ನೀರಿನಿಂದ ಮುಖ ತೊಳೆದುಕೊಳ್ಳಿ.

ಮುಖದ ಕಾಂತಿ

ಈ ಫೇಸ್ ಪ್ಯಾಕ್ ಬಳಕೆಯಿಂದ ಮುಖದ ಕಾಂತಿ ಹೆಚ್ಚುತ್ತದೆ. ಇದರಿಂದ ತ್ವಚೆಯ ಆರೋಗ್ಯವೂ ಹೆಚ್ಚುತ್ತದೆ.

ಹೆಚ್ಚುವುದು ಮುಖದ ಕಾಂತಿ

ಮುಖಕ್ಕೆ ನೈಸರ್ಗಿಕವಾಗಿ ಗ್ಲೋ ತರಬೇಕಾದರೆ ಈ ಫೇಸ್ ಪ್ಯಾಕ್ ಬಳಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story