ಪ್ರತಿ ರಾತ್ರಿ ಒಂದು ಲೋಟ ಹಾಲು.. ದೇಹಕ್ಕೆ ಅದೆಷ್ಟು ಲಾಭಗಳನ್ನು ತರುತ್ತದೆ!

Chetana Devarmani
Dec 23,2024

ಹಾಲು

ಪ್ರತಿದಿನ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ಹಾಲು

ಹಾಲು ಕುಡಿಯುವುದರಿಂದ ಆತಂಕವನ್ನು ನಿವಾರಿಸುತ್ತದೆ ಮತ್ತು ರಾತ್ರಿಯ ಹೊತ್ತು ಉತ್ತಮ ನಿದ್ರೆಯನ್ನು ನೀಡುತ್ತದೆ.

ಹಾಲು

ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದರಿಂದ ನಿದ್ರಾಹಿನತೆಯಿಂದ ಮುಕ್ತಿ ದೊರೆಯುತ್ತದೆ.

ಹಾಲು

ಹಾಲು ಸಿರೊಟೋನಿನ್, ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ.

ಹಾಲು

ಟ್ರಿಪ್ಟೊಫಾನ್ ಅನೇಕ ಪ್ರೋಟೀನ್-ಭರಿತ ಆಹಾರಗಳಲ್ಲಿ ಕಂಡುಬರುವ ಅಮೈನೋ ಆಮ್ಲವಾಗಿದೆ. ಇದು ನರಪ್ರೇಕ್ಷಕ ಸಿರೊಟೋನಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹಾಲು

ಸಿರೊಟೋನಿನ್ ಮನಸ್ಥಿತಿಯನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಹಾಲು

ನಿದ್ರೆಯ ಹಾರ್ಮೋನ್ ಎಂದೂ ಕರೆಯಲ್ಪಡುವ ಮೆಲಟೋನಿನ್ ನಿಮ್ಮ ಮೆದುಳಿನಿಂದ ಬಿಡುಗಡೆಯಾಗುತ್ತದೆ.

ಹಾಲು

ಹಾಲು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ.

ಹಾಲು

ರಾತ್ರಿ ಹಾಲು ಕುಡಿಯುವುದರಿಂದ ಗರ್ಭಾಶಯಕ್ಕೆ ಸರಿಯಾದ ಪೋಷಣೆಯನ್ನು ಒದಗಿಸುತ್ತದೆ ಮತ್ತು ನಿಮ್ಮ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

VIEW ALL

Read Next Story