ನಿತ್ಯ ಆಲೂಗಡ್ಡೆ ಜ್ಯೂಸ್ ಸೇವನೆಯಿಂದ ಏನೆಲ್ಲಾ ಪ್ರಯೋಜನ ಗೊತ್ತಾ!

Yashaswini V
Oct 27,2023

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿ ಆಗಿದೆ. ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೆ ಬಳಸಿದರೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

ಆಲೂಗಡ್ಡೆ ರಸ

ಆಲೂಗಡ್ಡೆಯನ್ನು ತಿನ್ನುವುದಕ್ಕಿಂತ ಅದರ ರಸ ತಯಾರಿಸಿ ಕುಡಿಯುವುದರಿಂದ ಆಲೂಗಡ್ಡೆ ರಸದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ, ಪೊಟ್ಯಾಸಿಯಮ್, ರಂಜಕ, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಲಭ್ಯವಾಗಲಿದೆ. ಇದರ ಪ್ರಯೋಜನಗಳೆಂದರೆ...

ಮಧುಮೇಹ

ಆಲೂಗಡ್ಡೆ ಜ್ಯೂಸ್ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಬಹು. ಇದು ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸಲು ತುಂಬಾ ಪ್ರಯೋಜನಕಾರಿ ಆಗಿದೆ.

ಕೀಲು ನೋವು

ಕೀಲು ನೋವಿನಿಂದ ಬಳಲುತ್ತಿರುವವರು ದಿನಕ್ಕೆ ಎರಡು ಬಾರಿ ಆಲೂಗಡ್ಡೆ ರಸವನ್ನು ಕುಡಿಯುವುದರಿಂದ ಪರಿಹಾರ ಪಡೆಯಬಹುದು.

ಮೂತ್ರಪಿಂಡ

ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು, ಆಲೂಗಡ್ಡೆ ರಸವನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.

ಕಲೆಗಳು

ಮುಖದಲ್ಲಿರುವ ಮೊಡವೆಗಳು ಮತ್ತು ಕಲೆಗಳನ್ನು ನಿವಾರಿಸಲು ಕೂಡ ಆಲೂಗೆಡ್ಡೆ ರಸ ಪ್ರಯೋಜನಕಾರಿ ಆಗಿದೆ.

ಉದರ ಸಮಸ್ಯೆ

ಆಲೂಗಡ್ಡೆ ರಸ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಬಾಧೆಗಳಿಂದ ದೂರ ಉಳಿಯಬಹುದು.

ಕೊಲೆಸ್ಟ್ರಾಲ್

ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.

ತೂಕ ಇಳಿಕೆ

ಆಲೂಗೆಡ್ಡೆ ರಸವನ್ನು ಕುಡಿಯುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು ಎಂದು ಹೇಳಲಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story