ಹಸಿ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..!

ಹಾಲು

ಹಾಲು ಒಂದು ಪರಿಪೂರ್ಣ ಆಹಾರ. ಹಾಗಾಗಿಯೇ ಹಾಲನ್ನು ಅಮೃತಕ್ಕೆ ಸಮ ಎನ್ನಲಾಗುತ್ತದೆ.

ಪೋಷಕಾಂಶಗಳ ಗಣಿ ಹಸಿ ಹಾಲು

ಹಸಿ ಹಾಲು ನೈಸರ್ಗಿಕ ಕಿಣ್ವಗಳು, ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹಾಗಾಗಿಯೇ ಇದು ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.

ಅಲರ್ಜಿಗೆ ಚಿಕಿತ್ಸೆ

ಹಸಿ ಹಾಲು ಕುಡಿಯುವವರಲ್ಲಿ ಅಲರ್ಜಿ ಸಮಸ್ಯೆ ಶೇ. 50ರಷ್ಟು ಕಡಿಮೆಯಿರುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಚರ್ಮದ ಆರೋಗ್ಯ

ಹಸಿ ಹಾಲಿನಲ್ಲಿ ಮೊಡವೆ ಮತ್ತು ಚರ್ಮದ ಉರಿಯೂತವನ್ನು ಕಡಿಮೆ ಮಾಡಬಲ್ಲ ಹಲವು ಪೋಷಕಾಂಶಗಳಿದ್ದು, ಇದನ್ನು ಚರ್ಮದ ಆರೋಗ್ಯಕ್ಕೆ ಉತ್ತಮಾವೆಂದು ಪರಿಗಣಿಸಲಾಗಿದೆ.

ಪೋಷಕಾಂಶಗಳ ಕೊರತೆ

ಹಸಿ ಹಾಲಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೇರಳವಾಗಿದ್ದು ಇದು ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ನೀಗಿಸಬಲ್ಲ ಪರಿಣಾಮಕಾರಿ ನೈಸರ್ಗಿಕ ಮದ್ದು.

ಕರುಳಿನ ಆರೋಗ್ಯ

ಹಸಿ ಹಾಲಿನಲ್ಲಿ ಕರುಳಿನ ಆರೋಗ್ಯವನ್ನು ಬೆಂಬಲಿಸುವ ಪ್ರೋಬಯಾಟಿಕ್‌ಗಳು ಕಂಡು ಬರುತ್ತದೆ. ಹಸಿ ಹಾಲಿನ ಸೇವನೆಯು ನೈಸರ್ಗಿಕವಾಗಿ ನಿಮ್ಮನ್ನು ಹಲವು ರೋಗಗಳಿಂದ ದೂರ ಉಳಿಯುವಂತೆ ಮಾಡುತ್ತದೆ.

ಜೀರ್ಣಕ್ರಿಯೆ

ಹಸಿ ಹಾಲಿನಲ್ಲಿ ಕಂಡು ಬರುವ ಕಿಣ್ವಗಳು ಉತ್ತಮ ಜೀರ್ಣಕ್ರಿಯೆಗೆ ಕೊಡುಗೆ ನೀಡುತ್ತದೆ.

ಒಟ್ಟಾರೆ ಆರೋಗ್ಯ

ಹಸಿ ಹಾಲಿನ ಸೇವನೆಯು ಜಲಸಂಚಯನ, ಮೂಳೆ ಸಾಂದ್ರತೆಯನ್ನು ನಿರ್ಮಿಸುವುದು, ರಕ್ತ ಪರಿಚಲನೆ, ನಿರ್ವಿಶೀಕರಣ, ಸ್ನಾಯುವಿನ ಆರೋಗ್ಯ ಮತ್ತು ಚಯಾಪಚಯ ಕ್ರಿಯೆ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಲಾಭದಾಯಕವಾಗಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story