ನಿತ್ಯ ಈ ಆಹಾರಗಳನ್ನು ಸೇವಿಸಿ ಕನ್ನಡಕಕ್ಕೆ ಹೇಳಿ ಗುಡ್ ಬೈ
ದಪ್ಪಮೆಣಸಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಖನಿಜಗಳು, ವಿಟಮಿನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೊಂದಿದ್ದು ಇದನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸಬಹುದು.
ನೆಲ್ಲಿಕಾಯಿಯಲ್ಲಿ ಕಂಡು ಬರುವ ಪೋಷಕಾಂಶಗಳು ದೃಷ್ಟಿ ದೋಷವನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಬಾದಾಮಿಯಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ನೈಸರ್ಗಿಕವಾಗಿ ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತದೆ.
ಸಾಲ್ಮನ್ ಮೀನುಗಳಲ್ಲಿ ಹೇರಳವಾಗಿ ಕಂಡು ಬರುವ ಒಮೆಗಾ 3 ಕಣ್ಣಿನಲ್ಲಿರುವ ಗ್ಲುಕೋಮಾವನ್ನು ರಕ್ಷಿಸುತ್ತದೆ.
ಸೋಂಪಿನಲ್ಲಿ ಕಂಡು ಬರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣಿನ ಪೊರೆ ಅಪಾಯವನ್ನು ಕಡಿಮೆ ಮಾಡತ್ತವೆ.
ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.
ಕ್ಯಾರೆಟ್ ನಲ್ಲಿ ಬೀಟಾಕರೋಟಿನ್ ಮತ್ತು ವಿಟಮಿನ್ ಎ ಇದ್ದು ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ತುಂಬಾ ಪ್ರಯೋಜನಕಾರಿಯಾಗಿದೆ.
ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.