ಚಳಿಗಾಲದಲ್ಲಿ ತೂಕ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ಈ ಹಣ್ಣುಗಳು

ಕಿತ್ತಳೆ ಹಣ್ಣು

ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೇವನೆಯಿಂದ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸಲು ಸಹಕಾರಿಯಾಗಿದೆ. ಹಾಗಾಗಿ ತೂಕ ನಷ್ಟಕ್ಕೆ ಕಿತ್ತಳೆ ಅತ್ಯುತ್ತಮ ಹಣ್ಣು.

ಅಂಜೂರ

ಫೈಬರ್ ಸಮೃದ್ಧಿತ ಅಂಜೂರದ ಹಣ್ಣಿನ ಸೇವನೆಯು ತ್ವರಿತ ಜೀರ್ಣಕ್ರಿಯೆಯನ್ನು ಉತ್ತೇಚ್ಚಿಸುತ್ತದೆ. ಜೊತೆಗೆ ಹೊಟ್ಟೆಯಲ್ಲಿ ದೀರ್ಘಕಾಲದಿಂದ ಶೇಖರಗೊಂಡಿರುವ ಕೊಬ್ಬನ್ನು ಕರಗಿಸಲು ತುಂಬಾ ಸಹಕಾರಿಯಾಗಿದೆ.

ಪೇರಲ

ಸಾಮಾನ್ಯವಾಗಿ ಸೀಬೆಹಣ್ಣು ಎಂತಲೇ ಕರೆಯಲ್ಪಡುವ ಪೇರಲ ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಇದು ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ.

ಸೀತಾಫಲ

ಚಳಿಗಾಲದಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿರುವ ಸೀತಾಫಲ ಹಣ್ಣನ್ನು ತಿನ್ನುವುದರಿಂದಲೂ ಅಧಿಕ ತೂಕವನ್ನು ನಿಯಂತ್ರಿಸಬಹುದು.

ಅನಾನಸ್

ಫೈಬರ್ ನ ಉತ್ತಮ ಮೂಲವಾಗಿರುವ ಅನಾನಸ್ ಹಣ್ಣಿನಲ್ಲಿ ಉರಿಯೂತದ ಕಿಣ್ವ ಬ್ರೊಮೆಲೈನ್ ಅನ್ನು ಹೊಂದಿರುತ್ತದೆ. ಈ ಕಿಣ್ವವು ಪ್ರೋಟೀನ್ಗಳ ಚಯಾಪಚಯ ಕ್ರಿಯೆಗೆ ಸಹಾಯಕವಾಗಿದ್ದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ದಾಳಿಂಬೆ

ದಾಳಿಂಬೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಪಾಲಿಫಿನಾಲ್ ದೇಹದ ಚಯಾಪಚಯವನ್ನು ಹೆಚ್ಚಿಸಿ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ದ್ರಾಕ್ಷಿ

ದ್ರಾಕ್ಷಿ ಹಣ್ಣು ಕಡಿಮೆ ಕ್ಯಾಲೋರಿ ಹಣ್ಣಾಗಿದ್ದು ಇದು ಇದು ಹೆಚ್ಚು ಕರಗುವ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಅರ್ಥಾತ್ ಇದು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಬಾಳೆಹಣ್ಣು

ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣು ಮಾರ್ನಿಂಗ್ ಬ್ರೇಕ್ಫಾಸ್ಟ್ ಆಗಿ ಸೇವಿಸುವುದರಿಂದ ಇದರಲ್ಲಿರುವ ಫೈಬರ್ ಅಂಶವು ತೂಕ ಇಳಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story