ಬೆವರು, ಧೂಳು, ಶುಚಿತ್ವದ ಕೊರತೆಯಿಂದಾಗಿ ತುರಿಕೆ ಸಮಸ್ಯೆ ಕಾಡಬಹುದು. ಆದರೆ, ಕೆಲವು ಮನೆಮದ್ದುಗಾಳಿಗೆ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಸ್ನಾನದ ಈರಿನಲ್ಲಿ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ತುರಿಕೆಯಿಂದ ಪರಿಹಾರ ದೊರೆಯುತ್ತದೆ.
ಆಂಟಿ ಫಂಗಲ್, ಆಂಟಿಸೆಪ್ಟಿಕ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವ ಟೀ ಟ್ರೀ ಆಯಿಲ್ ಬಳಕೆಯಿಂದ ತುರಿಕೆ ನಿವಾರಣೆಯಾಗುತ್ತದೆ.
ನೈಸರ್ಗಿಕ ನಂಜುನಿರೋಧಕ ಅರಿಶಿನದ ಲೇಪನವು ತುರಿಕೆಗೆ ಅತ್ಯುತ್ತಮ ಮನೆಮದ್ದಾಗಿದೆ.
ಪ್ರತಿಜೀವಕ ಗುಣಲಕ್ಷಣಗಳು, ನೈಸರ್ಗಿಕ ನಂಜುನಿರೋಧಕ ಗುಣಗಳಿರುವ ಬೇವಿನ ಎಲೆಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ತುರಿಕೆ ನಿವಾರಣೆಯಾಗುತ್ತದೆ.
ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸೂಕ್ಷ್ಮ ಜೀವಿಗಳು ನಾಶವಾಗಿ ತುರಿಕೆ ಕಡಿಮೆಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.