ದೇಹದಲ್ಲಿ ಪ್ರೊಟೀನ್ ಕೊರತೆಯಾದರೆ ಹೀಗಾಗುತ್ತದೆ

Ranjitha R K
Sep 20,2024

ಪ್ರೋಟಿನ್ ಅಗತ್ಯ

ಆರೋಗ್ಯ ಉತ್ತಮವಾಗಿರಬೇಕಾದರೆ ಪ್ರೋಟಿನ್ ಅತಿ ಅಗತ್ಯ. ದೇಹದಲ್ಲಿ ಇದರ ಕೊರತೆಯಾದರೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ.

ಮಾಂಸ ಖಂಡಗಳಲ್ಲಿ ನೋವು

ಪ್ರೋಟಿನ್ ಕೊರತೆಯಾದರೆ ಮಾಂಸ ಖಂಡಗಳು ದುರ್ಬಲವಾಗುತ್ತವೆ.ಪದೇ ಪದೇ ನೋವು ಕಾಣಿಸಿಕೊಳ್ಳುತ್ತದೆ.

ಪಾದಗಳಲ್ಲಿ ಊತ

ಪ್ರೋಟಿನ್ ಕೊರತೆಯಾದರೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ.ಇದು ಪಾದಗಳು ಊದಿ ಕೊಳ್ಳಲು ಕಾರಣವಾಗುತ್ತದೆ.

ರಕ್ತದ ಕೊರತೆ

ಪ್ರೋಟಿನ್ ಕೊರತೆಯಾದರೆ ರಕ್ತ ಕಣಗಳ ಉತ್ಪಾದನೆ ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ಅನಿಮಿಯಾ ಸಮಸ್ಯೆ ಅಂದರೆ ರಕ್ತದ ಕೊರತೆ ಕಾಣಿಸಿಕೊಳ್ಳುತ್ತದೆ.

ದುರ್ಬಲ ದೇಹ

ಪ್ರೋಟಿನ್ ಕೊರತೆಯಿಂದಾಗಿ ದೇಹ ದುರ್ಬಲವಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯ ಕೊರತೆಯಾಗುತ್ತದೆ.

ಲಿವರ್ ಆರೋಗ್ಯ

ಶರೀರದಲ್ಲಿ ಪ್ರೋಟೀನ್ ಕೊರತೆಯಾದರೆ ಲಿವರ್ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಗಾಯ ಗುಣವಾಗುವುದಿಲ್ಲ

ಪ್ರೋಟಿನ್ ಕೊರತೆಯಾದರೆ ಶರೀರದಲ್ಲಿ ಗಾಯವಾದರೆ ಆ ಗಾಯ ನೀಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.ಉಗುರುಗಳು ಬೇಗನೆ ಮುರಿಯುತ್ತವೆ.

ಕೂದಲು ಉದುರುವುದು

ಕೂದಲು ಉದುರುವುದಕ್ಕೆ ಪ್ರೋಟಿನ್ ಕೊರತೆಯೇ ಮುಖ್ಯ ಕಾರಣ


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story