1. Eye Care: ಕಣ್ಣುಕುಳಿ ಸಮಸ್ಯೆಯಿಂದ ನೀವೂ ತೊಂದರೆಗೆ ಒಳಗಾಗಿದ್ದೀರಾ? ಇಲ್ಲಿದೆ ಉಪಾಯ
2. ಕಣ್ಣುಗಳು ನಮ್ಮ ಶರೀರದ ಅತ್ಯಾವಶ್ಯಕ ಅಂಗಗಳಾಗಿವೆ. ಆದರೆ ಹಲವು ಕಾರಣಗಳಿಂದ ನಮ್ಮ ಕಣ್ಣುಗಳು ಒಳಭಾಗಕ್ಕೆ ಜಾರಲು ಆರಂಭಿಸುತ್ತವೆ.
3. ಇದರಿಂದ ಕಣ್ಣುಗಳ ಕೆಳಗೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಕೆಳಗೆ ಸೂಚಿಸಲಾಗಿರುವ ಕೆಲ ಸಲಹೆಗಳನ್ನು ಪ್ರಯತ್ನಿಸುವ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.
4. ದೇಹದಲ್ಲಿ ನೀರಿನ ಕೊರತೆ ಎದುರಾದಾಗ ಕಣ್ಣುಗಳಲ್ಲಿ ಕುಳಿ ಬೀಳಲು ಆರಂಭಿಸುತ್ತವೆ. ಕಣ್ಣುಗಳಲ್ಲಿ ಊತ ಹಾಗೂ ಒಣಕಣ್ಣುಗಳು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ತುಂಬಾ ಮುಖ್ಯ.
5. ಹಸಿರು ತರಕಾರಿಗಳಲ್ಲಿ ಕಂಡುಬರುವ ಲ್ಯೂಟೀನ್ ಹಾಗೂ ಜಾಕ್ಸೈನ್ಥೀನ್ ಗಳು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಇದರ ಜೊತೆಗೆ ಹಸಿರು ತರಕಾರಿಗಳಲ್ಲಿ ಕಂಡುಬರುವ ವಿಟಮಿನ್ ಗಳು ಮುಖಕ್ಕೆ ಹೊಸಪನ್ನು ನೀಡುವ ಕೆಲಸ ಮಾಡುತ್ತವೆ.
6. ಕಣ್ಣುಗಳ ಆರೋಗ್ಯಕ್ಕೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಗಜ್ಜರಿಯಲ್ಲಿ ಬೀಟಾ-ಕ್ಯಾರೋಟೀನ್ ಹಾಗೂ ವಿಟಮಿನ್ ಗಳು ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ.
7. ಇವುಗಳಲ್ಲಿನ ವಿಟಮಿನ್ ಒಳಭಾಗಕ್ಕೆ ಜಾರಿರುವ ಕಣ್ಣುಗಳನ್ನು ಸರಿಪಡಿಸುತ್ತವೆ. ಇವುಗಳ ಸೇವನೆಯಿಂದ ಕಣ್ಣುಗಳ ಕಾಂತಿ ಕೂಡ ಹೆಚ್ಚಾಗುತ್ತದೆ. ಇದರ ಜೊತೆಗೆ ಇವುಗಳಲ್ಲಿ ಸಿಗುವ ಪೌಷ್ಟಿಕಾಂಶಗಳು ದೇಹಕ್ಕೂ ಕೂಡ ಲಾಭಕಾರಿಯಾಗಿವೆ.
8. ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಒಳಗೊಂಡಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ