ಸೋಯಾ ಬಿನ್ ನಲ್ಲಿರುವ ಹೇರಳವಾದ ಪೋಷಕಾಂಶಗಳು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.
ಅಣಬೆಯಲ್ಲಿ ತಾಮ್ರದ ಪ್ರಮಾಣ ಹೆಚ್ಚಾಗಿ ಇರುತ್ತದೆ. ಇದು ಕೂದಲಿಗೆ ಬಣ್ಣ ನೀಡುವಲ್ಲಿ ಸಹಾಯ ಮಾಡುತ್ತದೆ.
ಡೈರಿ ಉತ್ಪನ್ನಗಳು ಕೂದಲಿನ ಆರೋಗ್ಯ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಇವುಗಳಲ್ಲಿ ಅತಿಯಾದ ಪೋಷಕಾಂಶಗಳು ಇರುತ್ತವೆ.
ಹಸಿರು ಎಲೆ ತರಕಾರಿಗಳು ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಡಾರ್ಕ್ ಚಾಕಲೇಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಅಧಿಕವಾಗಿದ್ದು ಕೂದಲು ಸಣ್ಣ ವಯಸ್ಸಿನಲ್ಲಿ ಬಿಳಿಯಾಗದಂತೆ ತಡೆಯುತ್ತದೆ.
ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ದವಾಗಿವೆ. ಇವು ನಮ್ಮ ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ.
ಕಾಳುಗಳು ವಿಟಮಿನ್ ಬಿಯ ಸಮೃದ್ದ ಮೂಲವಾಗಿರುತ್ತದೆ. ಇದು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿಲ್ಲ. ಇದನ್ನುಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಇದನ್ನೂ ಅಳವಡಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. zee kannada news ಇದನ್ನು ಅನುಮೋದಿಸುವುದಿಲ್ಲ