ಸಿರಿಧಾನ್ಯಗಳು ಗ್ಲೂಟೀನ್ ಮುಕ್ತವಾಗಿದೆ. ಇದರಲ್ಲಿ ಆಂಟಿ-ಆಕ್ಸಿಡೆಂಟ್ಸ್, ವಿಟಮಿನ್, ಫೈಬರ್ ಹೇರಳವಾಗಿರುತ್ತದೆ. ಇದು ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತದೆ.
ಹಾಗಲಕಾಯಿಯಲ್ಲಿ ಕ್ಯಾರಂಟಿನ್, ಪಾಲಿ-ಪೆಪ್ಟೈಡ್ ಪಿ ಹೇರಳವಾಗಿದ್ದು ಇದು ಶುಗರ್ ಲೆವೆಲ್ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದೆ.
ಕಡಲೆಬೇಳೆಯಲ್ಲಿ ಮ್ಯಾಗ್ನೀಶಿಯಮ್, ಪೊಟ್ಯಾಶಿಯಮ್, ಫೈಬರ್ ಸಮೃದ್ಧವಾಗಿದೆ. ಕಡಿಮೆ ಕ್ಯಾಲೋರಿ ಆಹಾರವಾಗಿರುವ ಇದು ಎಂದಿಗೂ ಬ್ಲಡ್ ಶುಗರ್ ಹೆಚ್ಚಾಗುವುದನ್ನು ಅನುಮತಿಸುವುದಿಲ್ಲ.
ಜಾಮೂನ್ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್ಸ್, ಪಾಲಿಫಿನಾಲ್ಸ್, ಐರನ್, ವಿಟಮಿನ್ ಸಿ ಕಂಡು ಬರುತ್ತದೆ. ಜಾಮೂನ್ ಹಣ್ಣನ್ನು ನೇರವಾಗಿ ತಿನ್ನುವುದು, ಇದರ ಬೀಜವನ್ನು ಪುಡಿ ಮಾಡಿ ತಿನ್ನುವುದರಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ.
ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸಿ, ತೂಕ ಇಳಿಕೆಯಾಗುತ್ತದೆ. ಜೊತೆಗೆ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.
ಚಿಯಾ ಸೀಡ್ಸ್ ಅನ್ನು ನೀರಿನಲ್ಲಿ ನೆನೆಸಿಟ್ಟು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಕೆಯಾಗಿ ಶುಗರ್ ನಿಯಂತ್ರಣದಲ್ಲಿರುತ್ತದೆ.
ಪ್ರೊಟೀನ್, ಫೈಬರ್, ಹೆಲ್ದಿ ಫ್ಯಾಟ್ ನಲ್ಲಿ ಸಮೃದ್ಧವಾಗಿರುವ ಬಾದಾಮಿಯನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಶುಗರ್ ಕಂಟ್ರೋಲ್ ಮಾಡಬಹುದು.
ಪಾಲಕ್ ಸೊಪ್ಪಿನಲ್ಲಿ ಮೇಗ್ನಿಷಿಯಮ್, ಕ್ಯಾಲ್ಸಿಯಂ, ಐರನ್ ಇರುವುದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಇದನ್ನು ತಿನ್ನುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.